ಬಂಟ್ವಾಳ, ಆಗಸ್ಟ್ 03, 2025 (ಕರಾವಳಿ ಟೈಮ್ಸ್) : ಅಮ್ಟೂರು ಗ್ರಾಮದ ಕೆದಿಲ ನಿವಾಸಿ ಅಬೂಬಕ್ಕರ್ ಅವರ ಸುಪುತ್ರಿ ಫಾತಿಮತ್ ಸಲ್ವನಾ ಎಂಬಾಕೆಯ ವಿವಾಹ ಸಮಾರಂಭವು ವಿಟ್ಲ ಸಮೀಪದ ಕಂಬಳಬೆಟ್ಟು ನಿವಾಸಿ ಉಮ್ಮರ್ ಅವರ ಸುಪುತ್ರ ಮುಹಮ್ಮದ್ ಝಾಬಿರ್ ಎಂಬ ವರನೊಂದಿಗೆ ಆಗಸ್ಟ್ 3 ರಂದು ಭಾನುವಾರ ಮಾಣಿ-ನೇರಳಕಟ್ಟೆ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಖಾಝಿ ಅಲ್ ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ನಿಕಾಹ್ ನೆರವೇರಿಸಿದರು. ಸಯ್ಯಿದ್ ಇಬ್ರಾಹಿಂ ಪೂಕುಂಞಿ ಕೋಯ ತಂಙಳ್ ಉದ್ಯಾವರ ಅವರು ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಜಿ ಪಂ ಮಾಜಿ ಸದಸ್ಯ ಎಂ ಎಸ್ ಮುಹಮ್ಮದ್ ಸಹಿತ ವಿವಿಧ ಗಣ್ಯರು, ಬಂಧು-ಮಿತ್ರರು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.
0 comments:
Post a Comment