ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿ ಉಪ್ಪಿನಂಗಡಿ ಪೊಲೀಸರ ಬಲೆಗೆ - Karavali Times ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿ ಉಪ್ಪಿನಂಗಡಿ ಪೊಲೀಸರ ಬಲೆಗೆ - Karavali Times

728x90

4 August 2025

ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿ ಉಪ್ಪಿನಂಗಡಿ ಪೊಲೀಸರ ಬಲೆಗೆ

ಉಪ್ಪಿನಂಗಡಿ, ಆಗಸ್ಟ್ 04, 2025 (ಕರಾವಳಿ ಟೈಮ್ಸ್) : ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣಗಳ ಕುಖ್ಯಾತ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಸೋಮವಾರ ದಸ್ತಗಿರಿ ಮಾಡಿದ್ದಾರೆ, 

ಬಂಧಿತ ಆರೋಪಿಯನ್ನು ಮೂಲತಃ ಹಾಸನ ಮೂಲದ, ಪ್ರಸ್ತುತ ಮಂಗಳೂರು ತಲಪಾಡಿ ಎಂಬಲ್ಲಿ ವಾಸವಾಗಿರುವ ಅಕ್ಬರ್ ಸೊಹೈಬ್ (24) ಎಂದು ಹೆಸರಿಸಲಾಗಿದೆ. ಬಂಧಿತ ಆರೋಪಿಯ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 2, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 1, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 4, ಕೇರಳದ ಕನಪ್ಪುರಂ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದು, ಈತ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ 5 ವರ್ಷಗಳಿಂದ ತಲೆಮರೆಸಿಕೊಂಡದ್ದ. ಈತನ ವಿರುದ್ದ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.

ಉಪ್ಪಿನಂಗಡಿ ಠಾಣಾ ಪಿಎಸ್ಸೈ ಕೌಶಿಕ್ ಅವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಶಿವರಾಮ ರೈ, ಶ್ರೀಶೈಲ ಎಂ ಕೆ, ಮೊಹಮ್ಮದ್ ಮೌಲನಾ ಅವರ ತಂಡ ಕಾರ್ಯಾಚರಣೆ ನಡೆಸಿ ಹಾಸನದ ಬಿಟ್ಟಗೌಡನಹಳ್ಳಿ ಎಂಬಲ್ಲಿಂದ ಬಂಧಿಸುವಲ್ಲಿ ಸಫಲರಾಗಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿ ಉಪ್ಪಿನಂಗಡಿ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top