ಬಂಟ್ವಾಳ, ಆಗಸ್ಟ್ 13, 2025 (ಕರಾವಳಿ ಟೈಮ್ಸ್) : ಅಮ್ಟಾಡಿ ಗ್ರಾಮದ ಮಂಡೆಗುರಿ ಹಿಂದೂ ರುದ್ರಭೂಮಿಯ ಸಾವಿರಾರು ರೂಪಾಯಿ ಮೌಲ್ಯದ ಹಲವು ಸಾಮಾಗ್ರಿಗಳನ್ನು ಕಳ್ಳರು ದೋಚಿದ ಘಟನೆ ಆಗಸ್ಟ್ 11 ರಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸ್ಮಶಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆಗಸ್ಟ್ 3 ರಂದು ಸ್ಮಶಾನದ ವಿದ್ಯುತ್ ದುರಸ್ತಿ ಮಾಡುದ ಸಂದರ್ಭ ಎಲ್ಲವೂ ಯಥಾಸ್ಥಿತಿಯಲ್ಲಿದ್ದು, ಆಗಸ್ಟ್ 11 ರಂದು ಮೃತದೇಹ ಅಂತ್ಯ ಸಂಸ್ಕಾರಕ್ಕೆ ತೆರಳಿದಾಗ ದಫನ ಮಾಡುವ ಕಬ್ಬಿಣದ 2 ಚೇಂಬರ್ ಗಳ ಒಳಗಡೆ ಅಳವಡಿಸಿದ ಕಬ್ಬಿಣದ ಬೀಡು ಕಾಣೆಯಾಗಿತ್ತು. ಇದರಿಂದ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಕಟ್ಟಿಗೆ ದಾಸ್ತಾನು ಕೋಣೆಯಲ್ಲಿದ್ದ 2 ಹಾರೆ, 1 ಪಿಕ್ಕಾಸು, ಹೊರಗೆ ಇಟ್ಟಿದ್ದ ಕಬ್ಬಿಣದ ಏಣಿ, ಬಾತ್ ರೂಮಿಗೆ ಅಳವಡಿಸಿದ್ದ 4 ಹಿತ್ತಾಳೆಯ ಟ್ಯಾಪ್ ಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಆಗಸ್ಟ್ 3 ರ ಮಧ್ಯಾಹ್ನ 12 ಗಂಟೆಯಿಂದ 11 ರ ಬೆಳಿಗ್ಗೆ 9.30 ಗಂಟೆಯ ಒಳಗೆ ಈ ಕಳವು ಕೃತ್ಯ ನಡೆದಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 70,400/- ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment