42ನೇ ರಾಜ್ಯಮಟ್ಟದ ಟ್ವೆಕಾಂಡೋ ಚಾಂಪಿಯನ್ ಶಿಪ್ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆಗಳಿಂದ ಅದ್ಭುತ ಪ್ರದರ್ಶನ, ಹಲವು ಪದಕಗಳು ಬಗಲಿಗೆ - Karavali Times 42ನೇ ರಾಜ್ಯಮಟ್ಟದ ಟ್ವೆಕಾಂಡೋ ಚಾಂಪಿಯನ್ ಶಿಪ್ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆಗಳಿಂದ ಅದ್ಭುತ ಪ್ರದರ್ಶನ, ಹಲವು ಪದಕಗಳು ಬಗಲಿಗೆ - Karavali Times

728x90

12 August 2025

42ನೇ ರಾಜ್ಯಮಟ್ಟದ ಟ್ವೆಕಾಂಡೋ ಚಾಂಪಿಯನ್ ಶಿಪ್ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆಗಳಿಂದ ಅದ್ಭುತ ಪ್ರದರ್ಶನ, ಹಲವು ಪದಕಗಳು ಬಗಲಿಗೆ

 ಬಂಟ್ವಾಳ, ಆಗಸ್ಟ್ 12, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಮೂಲದ ಟ್ವೆಕಾಂಡೋ ಕೋಚ್ ಇಸ್ಹಾಕ್ ಇಸ್ಮಾಯಿಲ್ ನಂದಾವರ ಅವರ ತರಬೇತಿಯಲ್ಲಿ ಪಳಗಿದ ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ಪಟುಗಳು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42ನೇ ರಾಜ್ಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ರೀಡಾ ವಿಭಾಗದಲ್ಲಿ ಜಿಲ್ಲೆಗೆ ಕೀರ್ತಿ ತಂದು ಗಮನ ಸೆಳೆದಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ತರಬೇತುದಾರ ಇಸ್ಹಾಕ್ ಇಸ್ಮಾಯಿಲ್ ಹಾಗೂ ಸಹಾಯಕ ತರಬೇತುದಾರ ಮೆಹುಲ್ ಬಂಗೇರ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಟ್ವೆಕಾಂಡೋ ಪಟುಗಳು ಅತ್ಯುತ್ತಮ ಕೌಶಲ್ಯ ಮತ್ತು ದೃಢ ಸಂಕಲ್ಪದ ಪ್ರದರ್ಶನ ನೀಡಿದೆ. ವಿವಿಧ ವಯೋಮಾನ ಮತ್ತು ತೂಕ ವಿಭಾಗಗಳಲ್ಲಿ ಹಲವು ಪದಕಗಳನ್ನು ಕ್ರೀಡಾಪಟು ಪ್ರತಿಭೆಗಳು ತಮ್ಮದಾಗಿಸಿಕೊಂಡು ರಾಜ್ಯ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇತಿಹಾಸ ನಿರ್ಮಿಸುವಂತೆ ಮಾಡಿದ್ದಾರೆ. 

ಸ್ವಪ್ನ (ಕೆಡೆಟ್ ಮಹಿಳಾ, 33 ಕೆಜಿ ವಿಭಾಗದಲ್ಲಿ ಚಿನ್ನದ ಪದಕ), ಮುಹಮ್ಮದ್ ನಿಹಾಲ್ (ಜೂನಿಯರ್ ಪುರುಷ, 63 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ), ಶಯಾನ್ (ಸಬ್-ಜೂನಿಯರ್ ಪುರುಷ, 12 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ), ವಿವಾನ್ ಕೆ (ಸಬ್-ಜೂನಿಯರ್ ಪುರುಷ, 8 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ), ವಿಹಾನ್ ಶೆಟ್ಟಿ (ಸಬ್-ಜೂನಿಯರ್ ಪುರುಷ, 8 ವರ್ಷದೊಳಗಿನ ವಿಭಾಗದಲ್ಲಿ ಕಂಚಿನ ಪದಕ), ಅನಿರುದ್ಧ್ ಕೆ (ಸಬ್-ಜೂನಿಯರ್ ಪುರುಷ, 10 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ), ಸುಮಿತ್ ಬುಡಿಯಾಲ್ (ಸಬ್-ಜೂನಿಯರ್ ಪುರುಷ, 12 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ), ಕ್ರಿಸ್ಟನ್ ಪಿ (ಸಬ್-ಜೂನಿಯರ್, 18 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಕಂಚಿನ ಪದಕ), ರಿಫಾ (ಸಬ್-ಜೂನಿಯರ್ ಮಹಿಳೆ, 12 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ) ಗೆದ್ದುಕೊಂಡು ಗಮನಾರ್ಹ ಸಾಧನೆಗೈದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 42ನೇ ರಾಜ್ಯಮಟ್ಟದ ಟ್ವೆಕಾಂಡೋ ಚಾಂಪಿಯನ್ ಶಿಪ್ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆಗಳಿಂದ ಅದ್ಭುತ ಪ್ರದರ್ಶನ, ಹಲವು ಪದಕಗಳು ಬಗಲಿಗೆ Rating: 5 Reviewed By: karavali Times
Scroll to Top