ಬಂಟ್ವಾಳ, ಆಗಸ್ಟ್ 14, 2025 (ಕರಾವಳಿ ಟೈಮ್ಸ್) : ಪುತ್ರಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ನೊಂದುಕೊಂಡಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿ ವ್ಯಕ್ತಿಯೋರ್ವರು ಮನೆಯಂಗಳದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಅಡ್ಡದ ಬೀದಿ ಎಂಬಲ್ಲಿ ಬುಧವಾರ ಸಂಭವಿಸಿದೆ.
ಮೃತರನ್ನು ನಿವೃತ್ತ ಬ್ಯಾಂಕ್ ಉದ್ಯೋಗಿ ವಿ ಜಿ ರವಿ (69) ಎಂದು ಹೆಸರಿಸಲಾಗಿದೆ. ಕಳೆದ 4 ವರ್ಷದ ಹಿಂದೆ ಇವರ ದೊಡ್ಡ ಮಗಳು ಅನಾರೋಗ್ಯದಿಂದ ಮೃತಪಟ್ಟಿದ್ದು ಬಳಿಕ ಇವರು ಮಾನಸಿಕವಾಗಿ ನೊಂದುಕೊಂಡಿದ್ದರು. ಇದೇ ಕಾರಣದಿಂದ ಬುಧವಾರ ಬೆಳಿಗ್ಗೆ ಮನೆಯಂಗಳದ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment