ಬಂಟ್ವಾಳ, ಆಗಸ್ಟ್ 14, 2025 (ಕರಾವಳಿ ಟೈಮ್ಸ್) : ಕಲ್ಲಡ್ಕ ಫ್ಲೈ ಓವರ್ ಮೇಲೆ ಕೆಟ್ಟು ನಿಂತಿದ್ದ ಲಾರಿಯ ಹಿಂಬದಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಚಾಲಕ ಗಾಯಗೊಂಡ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ.
ಗಾಯಗೊಂಡ ಲಾರಿ ಚಾಲನನ್ನು ಇಬ್ರಾಹಿಂ ಖಲೀಲ್ ಎಂದು ಹೆಸರಿಸಲಾಗಿದೆ. ಇವರು ಬೆಂಗಳೂರು ಕಡೆಯಿಂದ ಕೊಟ್ಟಾರ ಕಡೆಗೆ ತಮ್ಮ ಲಾರಿಯನ್ನು ಚಲಾಯಿಸಿಕೊಂಡು ಕಲ್ಲಡ್ಕ ಫ್ಲೈ ಓವರ್ ಮೇಲಿಂದ ಬರುವಾಗ ಫ್ಲೈ ಓವರ್ ಮೇಲೆ ಪಾರ್ಕಿಂಗ್ ಲೈಟ್ ಹಾಕದೆ ಕೆಟ್ಟು ನಿಂತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಇಬ್ರಾಹಿಂ ಖಲೀಲ್ ಅವರ ಕಾಲು ಹಾಗೂ ಕೈಗಳಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೊಲಾಸೋ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಖಲೀಲ್ ಅವರ ಸಂಬಂಧಿ, ಕಲ್ಲಡ್ಕ ನಿವಾಸಿ ಮಹಮ್ಮದ್ ಶರೀಫ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
































0 comments:
Post a Comment