ಬಂಟ್ವಾಳ, ಆಗಸ್ಟ್ 02, 2025 (ಕರಾವಳಿ ಟೈಮ್ಸ್) : ಓವರ್ ಟೇಕ್ ಭರದಲ್ಲಿದ್ದ ಕಾರೊಂದು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡ ಘಟನೆ ಬಿ ಮೂಡ ಗ್ರಾಮದ ತಲಪಾಡಿ ಕೆನರಾ ಮಿಲ್ ಮುಂಭಾಗ ಜುಲೈ 31 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ.
ಗಾಯಾಳು ಸ್ಕೂಟರ್ ಸವಾರನನ್ನು ಲಕ್ಷ್ಮೀನಾರಾಯಣ ಎಂದು ಹೆಸರಿಸಲಾಗಿದೆ. ಕಾರು ಚಾಲಕ ಅಬ್ದುಲ್ ಮಜೀದ್ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿನ ಎಡಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆ, ಕಣ್ಣಿನ ಬಳಿ, ಭುಜ, ಕೆನ್ನೆ, ಕೈ ಹಾಗೂ ಕಾಲುಗಳಿಗೆ ಗಾಯಗೊಂಡಿದ್ದಾರೆ. ತಕ್ಷಣ ಇವರನ್ನು ಅಪಘಾತಪಡಿಸಿದ ಕಾರು ಚಾಲಕ ಹಾಗೂ ಸಹ ಪ್ರಯಾಣಿಕ ನಸ್ಫಾನ್ ಅವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment