ಬಂಟ್ವಾಳ, ಆಗಸ್ಟ್ 02, 2025 (ಕರಾವಳಿ ಟೈಮ್ಸ್) : ಧಾರ್ಮಿಕ ಶ್ರದ್ದಾ ಕೇಂದ್ರದ ಕಾಣಿಕೆ ಡಬ್ಬಿಗಳನ್ನು ಕಳವುಗೈದ ಆರೋಪದಲ್ಲಿ ವಿಟ್ಲ ಪೊಲೀಸರು ಮೂವರು ಖದೀಮರನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ವಿಟ್ಲ ಕಸಬಾ ಗ್ರಾಮದ ನಿವಾಸಿಗಳಾದ ತ್ವಾಹಿದ್ (19), ಉಮ್ಮರ್ ಫಾರೂಕ್ (18) ಹಾಗೂ ಮೊಹಮ್ಮದ್ ನಬೀಲ್ (18) ಎಂದು ಹೆಸರಿಸಲಾಗಿದೆ.
ಧಾರ್ಮಿಕ ಶ್ರದ್ದಾ ಕೇಂದ್ರದ ಅಧ್ಯಕ್ಷರಾಗಿರುವ ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ ಡಿ ನಾರಾಯಣ ರಾವ್ (72) ಎಂಬವರು ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ನಾರಾಯಣ ರಾವ್ ಅವರು ಅಧ್ಯಕ್ಷರಾಗಿರುವ ಧಾರ್ಮಿಕ ಶ್ರದ್ದಾ ಕೇಂದ್ರದ ಕಾಣಿಕೆ ಕಟ್ಟೆಗಳು ದೇಲಂತಬೆಟ್ಟು ಶಾಲಾ ಪಕ್ಕದ ರಸ್ತೆ ಬದಿ ಹಾಗೂ ಚರ್ಚಿನ ಕೆಳಗೆ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದು, ಸದ್ರಿ ಕಾಣಿಕೆ ಕಟ್ಟೆಗಳಲ್ಲಿ ಸಂಗ್ರಹವಾಗಿರುವ ಹಣ ತೆಗೆಯುವರೇ ಜುಲೈ 26 ರಂದು ತೆರಳಿದಾಗ ಯಾರೋ ಕಳ್ಳರು ಎರಡೂ ಕಾಣಿಕೆ ಕಟ್ಟೆಗಳ ಬೀಗ ಒಡೆದು ಸುಮಾರು 12 ರಿಂದ 15 ಸಾವಿರ ರೂಪಾಯಿ ಹಣವನ್ನು ಕಳವು ಮಾಡಿರುವುದು ಕಂಡು ಬಂದಿದೆ ಎಂದು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ರಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ಯುವಕರನ್ನು ಬಂಧಿಸಿದ್ದಾರೆ.
0 comments:
Post a Comment