ಬಂಟ್ವಾಳ, ಆಗಸ್ಟ್ 03, 2025 (ಕರಾವಳಿ ಟೈಮ್ಸ್) : ದೆಹಲಿಯ ಎಕ್ಸ್ ಪ್ರೆಸ್ ಕೊರಿಯರ್ ಸರ್ವಿಸ್ ನಲ್ಲಿ ಗಿಫ್ಟ್ ಪಾರ್ಸೆಲ್ ಬಂದಿದೆ ಎಂದು ಮಹಿಳೆಯನ್ನು ನಂಬಿಸಿ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದುಕೊಂಡು ವಂಚಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಭಾರತಿ ಕೆ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇವರಿಗೆ 2024 ರ ಡಿಸೆಂಬರ್ 3 ರಂದು ಮೊಬೈಲ್ ಕರೆ ಮಾಡಿ ದೆಹಲಿಯ ಎಕ್ಸ್ ಪ್ರೆಸ್ ಕೊರಿಯರ್ ಸರ್ವಿಸ್ ನಲ್ಲಿ ಗಿಪ್ಟ್ ಪಾರ್ಸೆಲ್ ಬಂದಿದ್ದು ಇದರಲ್ಲಿ ಗೊಲ್ಡ್, ಐಪೆÇೀನ್, 49 ಲಕ್ಷ ಕರೆನ್ಸಿ ಇತರೆ ಮೌಲ್ಯದ ಗಿಪ್ಟ್ ಇರುವುದಾಗಿ ತಿಳಿಸಲಾಗಿದೆ. ಈ ಪಾರ್ಸೆಲ್ ಪಡೆದುಕೊಳ್ಳಲು ಕ್ಲಿಯರೆನ್ಸ್ ಗಾಗಿ ಮುಂಗಡವಾಗಿ ಹಣವನ್ನು ಪಾವತಿಸುವಂತೆ ತಿಳಿಸಿದ್ದು, ಆ ವೇಳೆ ಭಾರತಿ ಅವರು ನನ್ನಲ್ಲಿ ಹಣವಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಅದಕ್ಕೆ ಬಜಾಜ್ ನಿಂದ ಲೋನ್ ಮಾಡಿ ಈ ಪಾರ್ಸೆಲ್ ಪಡೆದುಕೊಳ್ಳಿ ಎಂದು ತಿಳಿಸಿದ್ದು, ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಮತ್ತೆ ಅವರು ಕರೆ ಮಾಡಿ ಸುಮಾರು 10 ಲಕ್ಷದವರೆಗೆ ಲೋನ್ ನೀಡುವುದಾಗಿ ಹೇಳಿದಂತೆ ಲೋನ್ ಪ್ರಕ್ರಿಯೇಗಾಗಿ ಹಣವನ್ನು ಮುಂಗಡವಾಗಿ ಪಾವತಿಸಬೇಕಾದುದರಿಂದ ಬಜಾಜ್ ಲೋನ್ ಗಾಗಿ ಹಂತ ಹಂತವಾಗಿ ಆತನು ನೀಡಿದ ಪೆÇೀನ್ ಪೇ, ಗೂಗಲ್ ಪೇ ಹಾಗೂ ಪೆಟಿಯಂನಿಂದ ನಂಬ್ರಕ್ಕೆ 80 ಸಾವಿರ ರೂಪಾಯಿ ಹಣವನ್ನು ಕಳುಹಿಸಿಕೊಟ್ಟಿದ್ದಾರೆ.
2025 ರ ಜೂನ್ 6 ರಂದು ಭಾರು ಅವರ ಮೊಬೈಲ್ ಸಂಖ್ಯೆಗೆ ಅನಾಮಧೇಯ ವಾಟ್ಸ್‍ಪ್ ಸಂಖ್ಯೆಯಿಂದ ದೆಹಲಿಯ ದೆಹಲಿಯ ಎಕ್ಸ್ ಪ್ರೆಸ್ ಕೊರಿಯರ್ ಸರ್ವಿಸ್ ನಲ್ಲಿ ನಿಮಗೆ ಗಿಪ್ಟ್ ಪಾರ್ಸೆಲ್ ಬಂದಿದ್ದು ಇದರಲ್ಲಿ ಗೊಲ್ಡ್, ಐಪೆÇೀನ್, 49 ಲಕ್ಷ ಕರೆನ್ಸಿ ಹಾಗೂ ಇತರೆ ಮೌಲ್ಯದ ಗಿಪ್ಟ್ ಇರುವುದಾಗಿ ತಿಳಿಸಿದ್ದಾನೆ. ಈ ಪಾರ್ಸೆಲ್ ನಿಯಮ ಬದ್ದವಾಗಿ ನಿಮಗೆ ಕಳುಹಿಸಿಕೊಡುವುದಾಗಿ ತಿಳಿಸಿದಂತೆ, ಇದಕ್ಕಾಗಿ ಮುಂಗಡವಾಗಿ 35 ಸಾವಿರ ರೂಪಾಯಿ ಹಣವನ್ನು ಪಾವತಿಸಲು ಹೇಳಿದಂತೆ, ಭಾರತಿ ಅವರು ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಆತನು ನೀಡಿದ ಬ್ಯಾಂಕ್‍ಗೆ ಜೂನ್ 6 ರಂದು 35 ಸಾವಿರ ರೂಪಾಯಿ, ಜೂನ್ 12 ರಂದು 65 ಸಾವಿರ ರೂಪಾಯಿ ಹಾಗೂ ಜೂನ್ 16 ರಂದು 50 ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿರುತ್ತಾರೆ. ಭಾರತಿ ಅವರು ವರ್ಗಾವಣೆ ಮಾಡಿರುವ ಒಟ್ಟು 2.35 ಲಕ್ಷ ರೂಪಾಯಿ ಹಣವನ್ನು ವಾಪಸ್ಸು ಹಿಂತಿರುಗಿಸದೆ ಹಾಗೂ ಗಿಪ್ಟ್ ಪಾರ್ಸೆಲ್ ಕೂಡಾ ನೀಡದೇ ವಂಚಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2025 ಕಲಂ 318(2), 318(4), 319(2) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment