ಪುತ್ತೂರು-ಇರ್ದೆ ದೇವಸ್ಥಾನದ ಕಳವು ಪ್ರಕರಣದ ಆರೋಪಿಗೆ 3 ವರ್ಷಗಳ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ - Karavali Times ಪುತ್ತೂರು-ಇರ್ದೆ ದೇವಸ್ಥಾನದ ಕಳವು ಪ್ರಕರಣದ ಆರೋಪಿಗೆ 3 ವರ್ಷಗಳ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ - Karavali Times

728x90

30 August 2025

ಪುತ್ತೂರು-ಇರ್ದೆ ದೇವಸ್ಥಾನದ ಕಳವು ಪ್ರಕರಣದ ಆರೋಪಿಗೆ 3 ವರ್ಷಗಳ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ

ಪುತ್ತೂರು, ಆಗಸ್ಟ್ 31, 2025 (ಕರಾವಳಿ ಟೈಮ್ಸ್) : ನಾಲ್ಕು ವರ್ಷಗಳ ಹಿಂದೆ ಪುತ್ತೂರು, ಇರ್ದೆ ಗ್ರಾಮದ ಮೂರ್ತಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣದ ಆರೋಪಿಗೆ 3 ವರ್ಷಗಳ ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 

ಶಿಕ್ಷೆಗೊಳಗಾದ ಆರೋಪಿಯನ್ನು ಪುತ್ತೂರು, ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ-ತಾರಿಗುಡ್ಡೆ, ಸೆಯ್ಯದ್ ಮೂಲೆ ನಿವಾಸಿ ಯೂಸುಫ್ ಎಂಬವರ ಮಗ ಮೊಹಮ್ಮದ್ ಸಲಾಂ ಅಲಿಯಾಸ್ ಡಾಲರ್ ಸಲಾಂ ಎಂದು ಹೆಸರಿಸಲಾಗಿದೆ. 

ಆರೋಪಿಯ ವಿರುದ್ದ 2021 ರ ಎಪ್ರಿಲ್ 23 ರಂದು ರಾತ್ರಿ 9 ಗಂಟೆಯಿಂದ ಎಪ್ರಿಲ್ 24ರ ನಡುವಿನ ಅವಧಿಯಲ್ಲಿ ಪುತ್ತೂರು ತಾಲೂಕು ಇರ್ದೆ ಗ್ರಾಮದ ಮೂರ್ತಿ ದೇವಸ್ಥಾನದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ  ಅಪರಾಧ ಕ್ರಮಾಂಕ 32/2021 ಕಲಂ 454, 457 380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ಪಿಎಸ್ಸೈ ಉದಯ ರವಿ ಅವರು ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಪುತ್ತೂರು ಎ ಎಸ್ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿರುತ್ತಾರೆ. ಸದ್ರಿ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ಎ ಎಸ್ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ದೇವರಾಜ ವೈ ಎಚ್ ಅವರು ಆಗಸ್ಟ್ 29 ಐಪಿಸಿ ಕಲಂ 457, 380 ಐಪಿಸಿ ಪ್ರಕರಣದ ಆರೋಪಿತನಿಗೆ 3 ವರ್ಷ ಸಜೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳು ಸದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 

ಪ್ರಕರಣದ ವಿಚಾರಣೆಯಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾಗಿ ಚೇತನ ದೇವಿ ಅವರು ವಾದ ಮಂಡಿಸಿರುತ್ತಾರೆ. ಪ್ರಕರಣದ ತನಿಖೆಯಲ್ಲಿ ತನಿಖಾ ಸಹಾಯಕರಾಗಿ ಎಚ್ ಸಿ ದೇವರಾಜ್ ಕೆ ಅವರು ಹಾಗೂ ನ್ಯಾಯಾಲಯದ ಸಿಬ್ಬಂದಿ ಪಿಸಿ ಮಾರುತಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು-ಇರ್ದೆ ದೇವಸ್ಥಾನದ ಕಳವು ಪ್ರಕರಣದ ಆರೋಪಿಗೆ 3 ವರ್ಷಗಳ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ Rating: 5 Reviewed By: karavali Times
Scroll to Top