ಮಂಗಳೂರು, ಆಗಸ್ಟ್ 19, 2025 (ಕರಾವಳಿ ಟೈಮ್ಸ್) : ಬ್ರಾಂಡೆಡ್ ಕ್ರೀಡಾ ಪರಿಕರಗಳೆಂದು ನಕಲಿ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿದ ಪೊಲೀಸರು ಕ್ರೀಡಾ ಸಾಮಾಗ್ರಿಗಳನ್ನು ವಶಪಡಿಸಿಕೊಂಡ ಘಟನೆ ಉಳ್ಳಾಲ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾದ ನಡೆದಿದೆ.
ಬ್ರಾಂಡ್ ಪ್ರೊಟೆಕ್ಟರ್ಸ್ ಇಂಡಿಯಾ ಪ್ರೈ. ಲಿ. ಇದರ ಸೌತ್ ಇಂಡಿಯಾ ರೀಜನಲ್ ಹೆಡೆ ಸ್ಟೀಫನ್ ರಾಜ್ ಎಂಬವರು ನೀಡಿದ ದೂರಿನ ಪ್ರಕಾರ ಉಳ್ಳಾಲ ಠಾಣಾ ವ್ಯಾಪ್ತಿಯ ಸ್ಪೋಟ್ರ್ಸ್ ವಿನ್ನರ್ ಅಂಗಡಿ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದೇವ್ ಸ್ಪೋಟ್ಸ್ ಸೆಂಟರಿನಲ್ಲಿ ಕೋಸ್ಕೋ, ನಿವಿಯಾ ಹಾಗೂ ಯೋನೆಕ್ಸ್ ಬ್ರಾಂಡ್ ಎಂದು ಹಾಕಿರುವ ನಕಲಿ ಫುಟ್ಬಾಲ್ ಗಳು, ವಾಲಿಬಾಲ್ ಗಳು ಹಾಗೂ ಬ್ಯಾಡ್ಮಿಂಟನ್ ರಾಕೆಟ್‍ಗಳು ಮಾರಾಟವಾಗುತ್ತಿರುವ ಬಗ್ಗೆ ದೂರಲಾಗಿತ್ತು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/2025, ಕಲಂ 51(1)(ಬಿ),63, ಕಾಪಿ ರೈಟ್ ಆಕ್ಟ್-1957 ಹಾಗೂ ಮಂಗಳೂರು ಉತ್ತರ ಠಾಣೆಯಲ್ಲಿ 95/2025 ಕಲಂ 51(1)(ಬಿ),63, ಕಾಪಿ ರೈಟ್ ಆಕ್ಟ್-1957 ರಂತೆ ಪ್ರಕರಣ ದಾಖಲಿಸಿಕೊಂಡು, ಉಳ್ಳಾಲ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ (ಆಗಸ್ಟ್ 19) ದಾಳಿ ನಡೆಸಿದ ಪೊಲೀಸರು ಸುಮಾರು 300 ನಕಲಿ ವಾಲಿಬಾಲ್ ಗಳು, ಫುಟ್ಬಾಲ್ ಗಳು ಹಾಗೂ ಬ್ಯಾಡ್ಮಿಂಟನ್ ರಾಕೆಟ್ ಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
0 comments:
Post a Comment