ಬಂಟ್ವಾಳ, ಆಗಸ್ಟ್ 19, 2025 (ಕರಾವಳಿ ಟೈಮ್ಸ್) : ಅಲ್ ಅಮೀನ್ ಚಾರಿಟಿ ಗ್ರೂಪ್ ಹಾಗೂ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಸಿದ್ದೀಕ್ ಸೂರ್ಯ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಇಡ್ಕಿದು ಗ್ರಾಮದ ಕೋಲ್ಪೆಯಲ್ಲಿ ಇತ್ತೀಚೆಗೆ ನಡೆಯಿತು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಕೋಲ್ಪೆ ಜುಮಾ ಮಸೀದಿ ಖತೀಬ್ ನೌಶಾದ್ ಕಾಮಿಲ್ ಸಖಾಫಿ ಅಲ್ ಪುರ್ಖಾನಿ ಬೆಳ್ಮ ದುಆ ನೆರವೇರಿಸಿದರು. ಗ್ರೂಪ್ ಆಫ್ ಕಣಚೂರಿನ ಮುಖ್ಯಸ್ಥ ಹಾಜಿ ಯು ಕೆ ಮೋನು ಕಣಚೂರು ಅಧ್ಯಕ್ಷತೆ ವಹಿಸಿದ್ದರು.
ಜಿ ಪಂ ಮಾಜಿ ಸದಸ್ಯ ಎಂ ಎಸ್ ಮುಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಅಳಿಕೆ, ಡಾ ಅಶೋಕ್ ಕಣಚೂರು, ಡಾ ಹೈದರ್ ಮರ್ದಾಳ, ಡಾ ಫಾರೂಕ್ ಕೆದಿಲ, ನೋಟರಿ-ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಕೋಲ್ಪೆ, ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಧಾಕರ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಶುಭ ಹಾರೈಸಿದರು.
ಇದೇ ವೇಳೆ ಸಮಾಜ ಸೇವಕ ಅಬೂಬಕ್ಕರ್ ಕೋಲ್ಪೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. 624 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ರೋಗಿಗಳಿಗೆ ಉಚಿತವಾಗಿ ಕನ್ನಡಕ ಹಾಗೂ ಔಷಧಿ ವಿತರಿಸಲಾಯಿತು. ಪಾಟ್ರಕೋಡಿ, ಮಿತ್ತೂರು, ಕಬಕ, ಅಳಕೆಮಜಲು, ಉರಿಮಜಲು ಹಾಗೂ ಕಂಬಳಬೆಟ್ಟು ಪರಿಸರಗಳಿಂದ ಶಿಬಿರಕ್ಕೆ ಬರುವ ರೋಗಿಗಳಿಗೆ ಉಚಿತ ವಾಹನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ತಂಪು ಪಾನೀಯ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಇಬ್ಬರು ಸಾಧಕ ವಿದ್ಯಾರ್ಥಿನಿಯರಿಗೆ ಹನೀಫ್ ಬಗ್ಗುಮೂಲೆ ಹಾಗೂ ಸಿದ್ದೀಕ್ ಸೂರ್ಯ ಚಿನ್ನದ ಉಂಗುರ ನೀಡಿ ಗೌರವಿಸಿದರು.
ಕೋಲ್ಪೆ ಮಸೀದಿ ಅದ್ಯಕ್ಷ ಶೇಖಬ್ಬ ಹಾಜಿ ಕೋಲ್ಪೆ, ಅಳಕೆಮಜಲು ಖತೀಬ್ ಹಂಝ ಮದನಿ, ಅದ್ಯಕ್ಷ ಅಬ್ದುರ್ರಹ್ಮಾನ್ ಮಸ್ಕತ್, ಕಾರ್ಯದರ್ಶಿ ಎ ಎಂ ಮಹಮ್ಮದ್ ಕುಂಞÂ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಪರ್ಲೊಟ್ಟು ಮಸೀದಿ ಅಧ್ಯಕ್ಷ ರಶೀದ್ ಪರ್ಲೊಟ್ಟು, ಕಂಬಳಬೆಟ್ಟು ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಮೋನು, ಮಿತ್ತೂರು ಮಸೀದಿ ಕಾರ್ಯದರ್ಶಿ ಸಾದಿಕ್ ಅಕ್ಕರೆ, ಕುಳ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ನ್ಯಾಯವಾದಿ ಶಾಕಿರ್ ಪುತ್ತೂರು, ಪ್ರಮುಖರಾದ ಹರೀಶ್ ದೇವಸ್ಯ, ಪುರುಷೋತ್ತಮ ಕೋಲ್ಪೆ, ಅಬ್ದುಲ್ ಖಾದರ್ ಕನ್ಝ್, ಆದಂ ಕೆದುವಡ್ಕ, ಅಬ್ದುಲ್ ರಝಾಕ್ ಮದೀನಾ, ಅಶ್ರಫ್ ಹೋನೆಸ್ಟ್, ಉಮರ್ ಯು ಎಸ್, ಮುನೀರ್ ಕಬಕ, ಫಾರೂಕ್ ಪಕ್ಕು ಕಬಕ, ಇಸ್ಮಾಯಿಲ್ ಪೆÇೀಳ್ಯ, ಇಸ್ಮಾಯಿಲ್ ಬಗ್ಗುಮೂಲೆ, ಫಾರೂಕ್ ತವಕ್ಕಲ್, ಸಿದ್ದೀಕ್ ಕಾರ್ಯಾಡಿ, ರವೀಂದ್ರನಾಥ ಮೇಲಾಂಟ, ಕೆ ಎಸ್ ಅರ್ಶದ್ ಕಬಕ, ರಝಾಕ್ (ಆರ್ ಟಿ ಒ) ಕಬಕ, ಬಾತಿಷ್ ಪಾಟ್ರಕೋಡಿ, ಹಾರಿಸ್ ಯುನೈನ್ ಕಬಕ, ಅಶ್ರಫ್ ಕೆ ಜಿ ಎನ್, ಶಾಕಿರ್ ಚಕ್ಕಿ ಅಳಕೆಮಜಲು, ಹಕೀಂ ಖಂದಕ್ ಮಿತ್ತೂರು, ಬಾತಿಶ್ ಅಳಕೆಮಜಲು, ಪ್ರದೀಪ್ ಕುಮಾರ್ ಶೆಟ್ಟಿ ಅಳಕೆಮಜಲು, ಕೃಷ್ಣ ಕಿಶೋರ್ ಭಟ್, ಅಬೂಬಕ್ಕರ್ ಮುಲ್ಲಾರು, ಹಮೀದ್ ಮೌಲಾ ಕಬಕ, ಸುಲೈಮಾನ್ ಅಕ್ಕರೆ, ಆಸಿಫ್ ಕೋಲ್ಪೆ, ಹಮೀದ್ ಕನ್ಯಾನ, ಶುಕೂರ್ ಹಾಜಿ ಪುತ್ತೂರು, ಯಹ್ಯಾ ಸಾಲ್ಮರ, ರಿಯಾಝ್ ಪರ್ಲಡ್ಕ, ಜುನೈದ್ ಸಾಲ್ಮರ, ಚಾಂದ್ ಬಶೀರ್, ಹನೀಫ್ ಪುಣ್ಚತ್ತಾರ್, ಅಬೂಬಕ್ಕರ್ ಐಎಂವೈಎ, ಶಾಫಿ ಸೂರ್ಯ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಹನೀಫ್ ಬಗ್ಗುಮೂಲೆ ಸ್ವಾಗತಿಸಿ, ಶಾಕಿರ್ ಅಳಕೆಮಜಲು ಪ್ರಾಸ್ತಾವನೆಗೈದರು. ಮುಹಮ್ಮದ್ ಸಿನಾನ್ ಅಳಕೆಮಜಲು ವಂದಿಸಿದರು. ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಮನ್ಸೂರ್ ನೇರಳಕಟ್ಟೆ, ಶಬ್ಬೀರ್ ಅಳಕೆಮಜಲು, ಸಾದಿಕ್ ಪಾಟ್ರಕೋಡಿ, ರಫೀಕ್ ಪಿ ಎಸ್, ಗಫೂರ್ ಎಜಿಟಿ, ರಿಯಾಝ್ ಕೋಲ್ಪೆ, ಕಣಚೂರು ಆಸ್ಪತ್ರೆಯ ಪ್ರಮುಖರಾದ ರಶೀದ್, ಸಂದೀಪ್, ಅಸ್ಗರ್ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳು ಸಹಕರಿಸಿದರು.
0 comments:
Post a Comment