ಮಂಗಳೂರು, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : 26 ವರ್ಷಗಳ ಹಿಂದಿನ ಕೋಮು ಗಲಭೆಯಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಕೊನೆಗೂ ದಸ್ತಗಿರಿ ಮಾಡುವಲ್ಲಿ ಮುಲ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮುಲ್ಕಿ ತಾಲೂಕು ಕೆಮ್ರಾಲ್ ಗ್ರಾಮದ ಪಕ್ಷಿಕೆರೆ ನಿವಾಸಿ ಕೂಕ್ರ ಸಾಲ್ಯಾನ್ ಎಂಬವರ ಪುತ್ರ ಲೀಲಾಧರ್ (52) ಹಾಗೂ ಹಳೆಯಂಗಡಿ, ಪೆಡುಪಣಂಬೂರು ನಿವಾಸಿ ಕೇಶವ ದಾಸ್ ಶೆಟ್ಟಿ ಎಂಬವರ ಪುತ್ರ ಚಂದ್ರಹಾಸ್ ಕೇಶವ ಶೆಟ್ಟಿ ಅಲಿಯಾಸ್ ಚಂದ್ರ (59) ಎಂದು ಹೆಸರಿಸಲಾಗಿದೆ.
1998 ರ ಡಿಸೆಂಬರ್ 31 ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ, ಬೆಂಕಿ ಹಚ್ಚಿ ನಡೆಸಿದ ಗಲಾಟೆ ಹಿನ್ನೆಲೆಯಲ್ಲಿ ಮುಲ್ಕಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 06/1999 ಕಲಂ 143, 147, 148, 436, 427 ಆರ್/ಡಬ್ಲ್ಯು 149 ಐಪಿಸಿ ಪ್ರಕರಣದಲ್ಲಿ, ಆರೋಪಿಗಳಾದ ಲೀಲಾಧರ್ ಹಾಗೂ ಚಂದ್ರಹಾಸ್ ಕೇಶವ ಶೆಟ್ಟಿ ಅವರು ಘಟನೆ ನಡೆದಾಗಿನಿಂದ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದರಿಂದ ಹಿಂದಿನ ತನಿಖಾಧಿಕಾರಿಗಳು ಇವರ ವಿರುದ್ದ ತಲೆಮರೆಸಿಕೊಂಡದ್ದ ಬಗ್ಗೆ ಉಲ್ಲೇಖಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಇಬ್ಬರು ಆರೋಪಿಗಳು ತನಿಖಾಧಿಕಾರಿಯವರಿಗೆ ಸಿಗದೇ ನ್ಯಾಯಾಲಯ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡು ಪರಾರಿಯಾಗಿದ್ದ ಮೇರೆಗೆ ಮೂಡಬಿದ್ರೆ ಹಿರಿಯ ಸಿಜೆ ಹಾಗೂ ಜೆ ಎಂ ಎಫ್ ಸಿ ನ್ಯಾಯಾಲಯ ಸಿಸಿ ಸಂಖ್ಯೆ 665/2014, ಎಲ್ ಪಿ ಸಿ ಸಂಖ್ಯೆ 10/2017 ಪ್ರಕರಣವೆಂದು ಘೋಷಿಸಿತ್ತು. ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 26 ವರ್ಷಗಳಿಂದ ತಲೆಮರೆಸಿಕೊಂಡಿರುವ ಎಲ್ ಪಿ ಸಿ ವಾರಂಟ್ ಆಸಾಮಿ ಲೀಲಾಧರ್ ಎಂಬಾತನನ್ನು ಇತ್ತೀಚೆಗೆ ಸ್ವದೇಶಕ್ಕೆ ಬಂದು ಪಕ್ಷಿಕೆರೆ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾಗ ಖಚಿತ ಮೇರೆಗೆ ದಾಳಿ ನಡೆಸಿದ ಮುಲ್ಕಿ ಪೊಲೀಸರು ಈತನನ್ನು ಸೋಮವಾರ (ಸೆ 8) ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅದೇ ರೀತಿ ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಚಂದ್ರಹಾಸ್ ಕೇಶವ ಶೆಟ್ಟಿ ಎಂಬಾತನನ್ನು ಸಹ ಇತ್ತೀಚೆಗೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನ್ಯಾಯಾಲಯದಿಂದ ಹೊರಡಿಸಿದ್ದ ಉದ್ಘೋಷನೆ ಆದೇಶ ಉಲ್ಲಂಘಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ ಈ ಇಬ್ಬರು ಆರೋಪಿಗಳ ವಿರುದ್ದ ಪ್ರತ್ಯೇಕವಾಗಿ 88/2025 ಮತ್ತು 94/2025 ಕಲಂ 208, 209 ಬಿ.ಎನ್.ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment