ಮಂಗಳೂರು, ಸೆಪ್ಟೆಂಬರ್ 12, 2025 (ಕರಾವಳಿ ಟೈಮ್ಸ್) : ನಗರದ ಮಿಲಾಗ್ರಿಸ್ ಚರ್ಚ್ ಬಳಿ ಸುಮಾರು 45-50 ವರ್ಷದ ಅಪರಿಚಿತ ಗಂಡಸು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದು, ವೆನ್‍ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂದು ದೃಢಪಟ್ಟಿರುತ್ತದೆ.
ಮೃತದೇಹದ ಚಹರೆ : 5 ಅಡಿ 4 ಇಂಚು ಎತ್ತರ, ಸಾಧಾರಣ ಶರೀರ, ಎಣ್ಣೆ ಕಪ್ಪು ಮೈ ಬಣ್ಣ, ಕೋಲು ಮುಖ, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು ಹಾಗೂ ಕಪ್ಪು ಬಿಳಿ ವಿಶ್ರಿತ ಮೀಸೆ ಗಡ್ಡ ಬಿಟ್ಟಿರುತ್ತಾರೆ. ಮೃತರು ಕೆಂಪು ಬಣ್ಣದ ಅರ್ಧ ತೋಳಿನ ಅಂಗಿ ಹಾಗೂ ನೀಲಿ ಬಣ್ಣದ ಫ್ಯಾಂಟ್ ಧರಿಸಿದ್ದರು.
ನಗರದ ರೈಲ್ವೆ ಸ್ಟೇಷನ್ ಹೋಗುವ ಫುಟ್‍ಪಾತ್ ನಲ್ಲಿ ಸುಮಾರು 60-65 ವರ್ಷದ ಅಪರಿಚಿತ ಗಂಡಸು ಬಿದ್ದು, ಉಸಿರಾಡಲು ಕಷ್ಟಪಡುತ್ತಿದ್ದು, ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ದೃಢಪಟ್ಟಿರುತ್ತದೆ.
ಮೃತದೇಹದ ಚಹರೆ : ಸುಮಾರು 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈ ಬಣ್ಣ, ಅರ್ಧ ಬೋಳಾದ ತಲೆ, ಬಿಳಿ-ಕಪ್ಪು ಬಣ್ಣ ಮಿಶ್ರಿತ ಬೋಳು ತಲೆ, ಕಪ್ಪು ಬಣ್ಣದ ಹಳದಿ ಕೆಂಪು ಮಿಶ್ರಿತ ಉದ್ದ ಗೆರೆಗಳಿರುವ ಶರ್ಟ್ ಹಾಗೂ ಕೇಸರಿ ಬಣ್ಣದ ಪಂಚೆ ಧರಿಸಿದ್ದರು.
ನಗರದ ಧಕ್ಕೆ ಬಳಿಯ ಅಮ್ಮ ಕ್ಯಾಂಟೀನ್ ಎದುರುಗಡೆ ಸುಮಾರು 50-55 ವರ್ಷದ ಓರ್ವ ಅಪರಿಚಿತ ಗಂಡಸು ಅಂಗಾತ ಬಿದ್ದಿದ್ದು, ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದಾಗಿ ದೃಢಪಟ್ಟಿರುತ್ತದೆ.
ಮೃತದೇಹದ ಚಹರೆ : ಸುಮಾರು 5.5 ಅಡಿ ಎತ್ತರ, ಕೋಲು ಮುಖ, 2 ಇಂಚು ಉದ್ದದ ಕಪ್ಪು ಹಾಗೂ ಬಿಳಿ ಮಿಶ್ರಿತ ಗಡ್ಡ, 4 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು, ಕುತ್ತಿಗೆಯಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ 2 ಶಿಲುಬೆಯುಳ್ಳ ಮಣಿ ಸರಗಳು, ಎಡಭಾಗದ ಭುಜದ ಕೆಳಗೆ ಮಚ್ಚೆ ಗುರುತು ಹಾಗೂ ಸುಮಿ ಎಂಬ ಇಂಗ್ಲಿಷ್ ಅಕ್ಷರವಿರುವ ಟ್ಯಾಟೋ ಇರುತ್ತದೆ. ನೀಲಿ ಬಣ್ಣದ ಲುಂಗಿ ಹಾಗೂ ಹಳದಿ ಹೂವಿನ ಚಿತ್ರವಿರುವ ನೀಲಿ ಬಣ್ಣದ ಬರ್ಮುಡ ಧರಿಸಿದ್ದರು.
ಮೃತದೇಹಗಳ ಗುರುತು ಪತ್ತೆಯಾದಲ್ಲಿ ದಕ್ಷಿಣ ಪೆÇಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment