ಬಾಲಕಾರ್ಮಿಕರ ಕುರಿತು ಅರಿವು ನೆರವು ಅಗತ್ಯ : ನ್ಯಾಯಾಧೀಸೆ ಜೈಬುನ್ನೀಸಾ - Karavali Times ಬಾಲಕಾರ್ಮಿಕರ ಕುರಿತು ಅರಿವು ನೆರವು ಅಗತ್ಯ : ನ್ಯಾಯಾಧೀಸೆ ಜೈಬುನ್ನೀಸಾ - Karavali Times

728x90

12 September 2025

ಬಾಲಕಾರ್ಮಿಕರ ಕುರಿತು ಅರಿವು ನೆರವು ಅಗತ್ಯ : ನ್ಯಾಯಾಧೀಸೆ ಜೈಬುನ್ನೀಸಾ

ಮಂಗಳೂರು, ಸೆಪ್ಟೆಂಬರ್ 12, 2025 (ಕರಾವಳಿ ಟೈಮ್ಸ್) : ನಮ್ಮ ದೇಶದಲ್ಲಿ ಮಕ್ಕಳನ್ನು ದೇವರ ರೂಪ ಎಂದು ಪರಿಗಣಿಸಲಾಗುತ್ತದೆ. ಆದರೆ ಅನೇಕರ ಬಾಲ್ಯವು ಶಿಕ್ಷಣ, ಆಟ, ಸಂಭ್ರಮದಿಂದ ತುಂಬಿರಬೇಕಾದ ಸಮಯದಲ್ಲಿ ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ಕಳೆಯುತ್ತಿದೆ. ಈ ದುಸ್ಥಿತಿ ತಡೆಯಲು  ಬಾಲಕಾಮಿಕರ ಕುರಿತು ಅರಿವು ನೆರವು ಮೂಡಿಸುವುದು ಅಗತ್ಯ ಎಂದು  ಹಿರಿಯ ಸಿವಿಲ್ ನ್ಯಾಯಾಧೀಶೆ  ಜೈಬುನ್ನೀಸಾ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಪೆÇಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ ನಡೆದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಪ್ರಸ್ತುತ ತಿದ್ದುಪಡಿ ಕಾಯ್ದೆ 2016ಕ್ಕೆ ಸಂಬಂಧಿಸಿದ ಪ್ರಾವಧಾನ, ಮಾನವ ಕಳ್ಳ ಸಾಗಾಣಿಕೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ ಮಾತನಾಡಿ, ದೇಶದ ಪ್ರತಿಯೊಬ್ಬ ಮಕ್ಕಳಿಗೂ ಉಜ್ವಲ ಭವಿಷ್ಯ ಸಮಾನ ಹಕ್ಕುಗಳು ಮತ್ತು ಸಂತೋಷಕರ ಬಾಲ್ಯ ಒದಗಿಸುವುದು ಬಾಲ ಕಾರ್ಮಿಕ ನಿಯಂತ್ರಣ ಕಾಯ್ದೆಯ ಉದ್ದೇಶ ಎಂದರು. 

ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಸೆನ್ ಪೆÇಲೀಸ್ ಠಾಣೆಯ ಉಪನಿರೀಕ್ಷಕ ರೇವಣ್ಣ ಸಿದ್ದಪ್ಪ, ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಪ್ರಸ್ತುತ ತಿದ್ದುಪಡಿ ಕಾಯ್ದೆ 2016ಕ್ಕೆ ಸಂಬಂಧಿಸಿದ ಪ್ರಾವಧಾನ ಕುರಿತು ಕಾರ್ಮಿಕ ಅಧಿಕಾರಿ ಉಪವಿಭಾಗ-2 ವಿಲ್ಮಾ ಎಲಿಜಬೆತ್ ತಾವ್ರೋ, ಹಾಗೂ ತಂಬಾಕು ನಿಯಂತ್ರಣ ಕಾಯ್ದೆಯ ಕುರಿತು  ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ನವೀನ್ ಚಂದ್ರ ಉಪನ್ಯಾಸ ನೀಡಿದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಶ್ರೀನಿವಾಸ್,  ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ್, ಸಂಯೋಜಕಿ ವಿನುತಾ ಕೆ., ಹಿರಿಯ ಕಾರ್ಮಿಕ ನಿರೀಕ್ಷಕ ಪ್ರಸನ್ನ ಕುಮಾರ್ ಭಾಗವಹಿಸಿದ್ದರು. ವಿನುತಾ.ಕೆ ಸ್ವಾಗತಿಸಿ, ಮೋನಿಕ ಎಂ ವಂದಿಸಿದರು. ಕಾನೂನು ವಿದ್ಯಾರ್ಥಿ ಶಂಕರ್ ಓಬಳಬಂಡಿ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಾಲಕಾರ್ಮಿಕರ ಕುರಿತು ಅರಿವು ನೆರವು ಅಗತ್ಯ : ನ್ಯಾಯಾಧೀಸೆ ಜೈಬುನ್ನೀಸಾ Rating: 5 Reviewed By: karavali Times
Scroll to Top