ಪುತ್ತೂರು, ಸೆಪ್ಟೆಂಬರ್ 18, 2025 (ಕರಾವಳಿ ಟೈಮ್ಸ್) : ಅಕ್ಟೋಬರ್ 20 ರಂದು ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ 13ನೇ ವರ್ಷದ ‘ಅಶೋಕ ಜನಮನ-2025’ ಕಾರ್ಯಕ್ರಮ ನಡೆಸಲು ಸಹಕಾರಿಯಾಗುವಂತೆ 23 ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಪ್ರವರ್ತಕಿ, ಶಾಸಕ ಅಶೋಕ್ ರೈ ಅವರ ಧರ್ಮಪತ್ನಿ ಸುಮಾ ಅಶೋಕ್ ರೈ ತಿಳಿಸಿದರು. ಗುರುವಾರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲ್ಲಾ ಸಮಿತಿಗಳಿಗೂ ವಿವಿಧ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದರು.
ಕಾರ್ಯಕ್ರಮದ ಬಗ್ಗೆ ಪ್ರತೀ ಗ್ರಾಮಕ್ಕೆ ತೆರಳಿ ಪ್ರಚಾರವನ್ನು ನಡೆಸುವ ಮೂಲಕ ಗ್ರಾಮಸ್ಥರನ್ನು ಆಹ್ವಾನಿಸಲಾಗುತ್ತದೆ. ಸ್ಥಳೀಯ ಗ್ರಾಮಸ್ಥರು ಈ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಪ್ರಚಾರ ಮತ್ತು ಆಹ್ವಾನ ಸಭೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಬಂಧುಗಳು ಸಹಕಾರ ನೀಡಬೇಕು ಎಂದ ಸುಮಾ ಅಶೋಕ್ ರೈ ನೀರಾವರಿ ಸಮಿತಿ, ಸಾಂಸ್ಕೃತಿಕ ಸಮಿತಿ, ಗೂಡುದೀಪ ಸಮಿತಿ, ಪ್ರಚಾರ, ಮಾಧ್ಯಮ ಸಮಿತಿ, ನಿರ್ವಹಣಾ ಸಮಿತಿ, ವಸ್ತ್ರ ಸಂಯೋಜನೆ ಸಮಿತಿ, ಗ್ರಾಮ ಭೇಟಿ ಸಮಿತಿ, ವಸ್ತ್ರ ವಿತರಣಾ ಸಮಿತಿ, ಆರೋಗ್ಯ ಸಮಿತಿ, ಅತಿಥಿ ಸತ್ಕಾರ ಸಮಿತಿ, ಮಾಹಿತಿ ಕೇಂದ್ರ, ವೇದಿಕೆ ಸಮಿತಿ, ವಾಹನ ನಿರ್ವಹಣಾ ಸಮಿತಿ, ಸ್ವಯಂ ಸೇವಕರ ಸಮಿತಿ, ಆಹಾರ ವಿತರಣೆ ಸಮಿತಿ, ಆಹಾರ ಸಿದ್ದತೆ ಸಮಿತಿ, ಚಪ್ಪರ ಸಮಿತಿ, ನೋಂದಾವಣೆ ಸಮಿತಿ, ವೈದಿಕ ಸಮಿತಿ, ಸ್ವಾಗತ ಸಮಿತಿ, ವೇದಿಕೆ ಅಲಂಕಾರ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಇದೇ ವೇಳೆ ಅಶೋಕ ಜನಮನ ಕಾರ್ಯಕ್ರಮದ ಕರಪತ್ರವನ್ನು ಸುಮಾ ಅಶೋಕ್ ರೈ ಬಿಡುಗಡೆ ಮಾಡಿದರು. ಸಭೆಯಲ್ಲಿ ರೈ ಚಾರಿಟೇಬಲ್ ಟ್ರಸ್ಟ್ ಮಾಧ್ಯಮ ಸಲಹೆಗಾರ ಕೃಷ್ಣಪ್ರಸಾದ್ ಬೊಳ್ಳಾವು, ಟ್ರಸ್ಟ್ ಪ್ರಮುಖರಾದ ಯೋಗೀಶ್ ಸಾಮಾನಿ, ಜಯಪ್ರಕಾಶ್ ಬದಿನಾರ್, ಚಂದ್ರಶೇಖರ ಕಲ್ಲಗುಡ್ಡೆ, ಸಿದ್ದಿಕ್ ಸುಲ್ತಾನ್, ದಯಾನಂದ ರೈ ಕೊಮ್ಮಂಡ, ಸಾಹಿರಾ ಬನ್ನೂರು, ಪ್ರವೀಣ್ ಆಚಾರ್ಯ, ಮೋಹನ್ ಗುರ್ಜಿನಡ್ಕ, ನೆಬಿಸಾ ಬಪ್ಪಳಿಗೆ, ಚಂದ್ರಪ್ರಭಾ, ಹರೀಶ್ ಬಂಗೇರಾ, ಪೂರ್ಣಿಮಾ ರೈ, ಅನಿ ಮಿನೇಜಸ್, ಹಕೀಂ ಬೊಳುವಾರು, ಧರಣಿ ಕೆಯ್ಯೂರು, ರೇವತಿ ಬಡಗನ್ನೂರು, ಬಾಬು ರೈ ಕೋಟೆ, ಲೋಕೇಶ್ ಪಡ್ಡಾಯೂರು, ಬಾಬು ಮರಿಕೆ, ಗಿರೀಶ್ ಸಂಟ್ಯಾರ್, ರಾಕೇಶ್ ರೈ ಕುದ್ಕಾಡಿ, ಸತೀಶ್ ರೈ ನಿಡ್ಪಳ್ಳಿ, ಜಯಶೀಲ ಲಿಂಗಪ್ಪ ಮೊದಲಾದವರು ಭಾಗವಹಿಸಿದ್ದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿ, ಕಚೇರಿ ಸಿಬಂದಿ ಲಿಂಗಪ್ಪ, ರಚನಾ ರೈ ವಿವಿಧ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment