ಬೆಂಗಳೂರು, ಸೆಪ್ಟೆಂಬರ್ 18, 2025 (ಕರಾವಳಿ ಟೈಮ್ಸ್) : ಮಾಣಿ-ಸಂಪಾಜೆ ಚತುಷ್ಪಥ ಹೆದ್ದಾರಿ-275ರ ಕಾಮಗಾರಿಗೆ ಡಿ ಪಿ ಆರ್ ಮುಗಿದಿದ್ದು ವಾರ್ಷಿಕ ಯೋಜನೆಯಲ್ಲಿ ಹೆದ್ದಾರಿಯನ್ನು ಸೇರ್ಪಡೆಗೊಳಿಸಿ ಕಾಮಗಾರಿ ಆರಂಭ ಮಾಡುವಂತೆ ಎನ್ ಎಚ್ ರೀಜನಲ್ ಆಫೀಸರ್ ನರೇಂದ್ರ ಶರ್ಮ ಅವರಿಗೆ ಶಾಸಕ ಅಶೋಕ್ ರೈ ಸೂಚಿಸಿದ್ದಾರೆ.
ಬೆಂಗಳೂರಿನ ಎನ್ ಎಚ್ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ನರೇಂದ್ರ ಶರ್ಮಾ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು ಡಿಪಿಆರ್ ಮಾಡಿಸಲು ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ 3.10 ಕೋಟಿ ಅನುದಾನ ಬಿಡುಗಡೆಯಾಗಿ ಡಿಪಿಆರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಇನ್ನುಕಾಮಗಾರಿ ಆರಂಭವಾಗಬೇಕಾದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯನ್ನು ಸೇರಿಸಿಕೊಳ್ಳುವ ಮೂಲಕ ಕಾಮಗಾರಿ ಸ್ಪೀಡಪ್ ಮಾಡಬೇಕೆಂದು ಸೂಚಿಸಿದರು.
ಮಾಣಿಯಿಂದ ಸಂಪಾಜೆ ತನಕ ಚತುಷ್ಫಥ ಹೆದ್ದಾರಿಯಾದಲ್ಲಿ ಈ ಭಾಗ ಅಭಿವೃದ್ದಿಯಾಗಲಿದೆ. ಈ ಹಿಂದೆಯೇ ಇದು ಆಗಬೇಕಿತ್ತು. ಚತುಷ್ಪಥ ಹೆದ್ದಾರಿಯನ್ನಾಗಿ ರೂಪಿಸಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ಸಂಬಂದಪಟ್ಟ ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ. ರಾಜ್ಯ ಸರಕಾರ ಡಿಪಿಆರ್ ಮಾಡಿಸಲು ಅನುದಾನವನ್ನು ಬಿಡುಗಡೆ ಮಾಡಿದೆ. ಕಾಮಗಾರಿ ವಿಳಂಬವಾಗಬಾರದು, ಆದಷ್ಟುಶೀಘ್ರ ಕಾಮಗಾರಿ ನಡೆದು ಈ ಭಾಗದ ಜನರ ಬಹುಕಾಲದ ಕನಸು ನನಸಾಗಬೇಕು ಎಂದು ಪುತ್ತೂರು ಅಶೋಕ್ ರೈ ಹೇಳಿದ್ದಾರೆ.
0 comments:
Post a Comment