ಬಿ.ಸಿ.ರೋಡಿನಲ್ಲಿ ಬಂಟ್ವಾಳ ಕೃಷಿಕ ಸಮಾಜ ಭವನ ಲೋಕಾರ್ಪಣೆ
ಬಂಟ್ವಾಳ, ಸೆಪ್ಟೆಂಬರ್ 02, 2025 (ಕರಾವಳಿ ಟೈಮ್ಸ್) : ಅಂತರ್ಜಲ ಹೆಚ್ವಿಸುವ ನಿಟ್ಟಿನಲ್ಲಿ ಹಿಂದಿನ ಸಿದ್ದರಾಮ್ಯ ಸರಕಾರ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸೀಮಿತಗೊಂಡಂತೆ ಸುಮಾರು 300 ಕೋಟಿ ರೂಪಾಯಿ ಮೀಸಲಾಗಿಸಿ ಪಶ್ಚಿಮ ವಾಹಿನಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಜಾರಿ ಬಳಿಕ ಪ್ರಮುಖ ನದಿಗಳಿಗೆ ಅಲ್ಲಲ್ಲಿ ಡ್ಯಾಂ ನಿರ್ಮಿಸಿ ನೀರಿನ ಸಂಗ್ರಹದ ಜೊತೆಗೆ ಅಂತರ್ಜಲದ ಹೆಚ್ಚಳವಾಗಿದೆ. ಇದರಿಂದಾಗಿ ನೀರಿನ ಸಮಸ್ಯೆಗೂ ಸಾಕಷ್ಟು ಪ್ರಮಾಣದಲ್ಲಿ ಪರಿಹಾರ ದೊರೆತಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅಭಿಪ್ರಾಯಪಟ್ಟರು.
ಬಿ ಸಿ ರೋಡಿನ ಬಂಟ್ವಾಳ ಕೃಷಿ ಕಚೇರಿ ಸಮೀಪ ತಾಲೂಕು ಕೃಷಿಕ ಸಮಾಜದ ವತಿಯಿಂದ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಕೃಷಿಕ ಸಮಾಜ ಭವನ’ ಉದ್ಘಾಟನಾ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿಕರ ಅಭ್ಯುದಯ ಮುಖ್ಯ ಉದ್ದೇಶ ಕೃಷಿಕ ಸಮಾಜದ್ದು. ಈ ನಿಟ್ಟಿನಲ್ಲಿ ಬಂಟ್ವಾಳದಲ್ಲಿ ನಿವೇಶನ ಕಾದಿರಿಸಿ ಕೃಷಿಕ ಸಮಾಜ ಭವನ ನಿರ್ಮಾಣ ಆಗಿದೆ. ಮುಂದಕ್ಕೆ ಇನ್ನಷ್ಟು ಅಭಿವೃದ್ದಿ ಆಗಬಹುದು ಎಂದು ಆಶಿಸಿದರು.
ದ ಕ ಜಿಲ್ಲೆಯ ಕೃಷಿಕರು ಭತ್ತದ ಕೃಷಿಯ ಜೊತೆ ಲಾಭದಾಯಕವಾದ ತೋಟಗಾರಿಕೆ ಬೆಳೆಯಲ್ಲು ಅವಲಂಭಿತರಾಗಿದ್ದಾರೆ. ಬಂಟ್ವಾಳ ತಾಲೂಕು ಅತೀ ಹೆಚ್ಚು ಸಣ್ಣ ಹಿಡುವಳಿದಾರರನ್ನು ಹೊಂದಿರುವ ತಾಲೂಕಾಗಿದ್ದು, ಇಲ್ಲಿನ ಮಣ್ಣಿನ ಗುಣಕ್ಕೆ ಅನುಗುಣವಾಗಿ ಕಾಫಿ ಸಹಿತ ಪರ್ಯಾಯ ಬೆಳೆಯ ಕುರಿತಾಗಿ ಅಧಿಕಾರಿಗಳು ಸಕಾಲದಲ್ಲಿ ಮಾಹಿತಿ ನೀಡಬೇಕು ಎಂದರು.
ಕರ್ನಾಟಕ ಕೃಷಿಕ ಸಮಾಜ ಸಮಾಜ ಬೆಂಗಳೂರು ಇದರ ಆಡಳಿತ ಅಧ್ಯಕ್ಷ ಮಂಜುನಾಥ ಗೌಡ ಎಸ್ ಆರ್, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೋ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ, ಕೋಶಾಧಿಕಾರಿ ಚಂದ್ರ ಕೋಲ್ಚಾರ್, ಜಿ ಪಂ ಮಾಜಿ ಸದಸ್ಯರುಗಳಾದ ಎ ಸಿ ಭಂಡಾರಿ, ಬಿ ಪದ್ಮಶೇಖರ ಜೈನ್, ಬಂಟ್ವಾಳ ಕೃಷಿ ಸಹಾಯಕ ನಿರ್ದೇಶಕಿ ವೀಣಾ ಕೆ ಆರ್, ಬಂಟ್ವಾಳ ಹಿರಿಯ ತೋಟಗಾರಿಕಾ ನಿರ್ದೇಶಕ ಜೋ ಪ್ರದೀಪ್ ಡಿಸೋಜಾ, ಬಂಟ್ವಾಳ ಕೃಷಿ ಅಧಿಕಾರಿ ನಂದನ್ ಶೆಣೈ, ಎಂ ಆರ್ ಪಿ ಎಲ್ ಅಧಿಕಾರಿ ಕೃಷ್ಣ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು.
ಕೃಷಿಕ ಸಮಾಜದ ಕಾರ್ಯದರ್ಶಿ ರಮಾನಾಥ ವಿಟ್ಲ, ಪದಾಧಿಕಾರಿಗಳಾದ ಆಲ್ಬರ್ಟ್ ಮಿನೇಜಸ್, ಗಣೇಶ್ ಶೆಟ್ಟಿ ಗೋಳ್ತಮಜಲು, ಬದ್ರುದ್ದೀನ್ ಮಂಚಿ, ರಮೇಶ್ ನೆಟ್ಲ, ದೇವದಾಸ ರೈ ಕೆಲಿಂಜ, ಮಹಮ್ಮದ್ ನಂದರಬೆಟ್ಟು, ಎಸ್ ಎನ್ ಹೊಳ್ಳ ನರಿಕೊಂಬು, ವಿಶ್ವನಾಥ ನಾಯ್ಕ್ ಮಂಚಿ, ಕೆ ಮೋಹನ ಆಚಾರ್ಯ, ಶೇಖ್ ರಹ್ಮತುಲ್ಲಾ ಉಪಸ್ಥಿತರಿದ್ದರು.
ಇದೇ ವೇಳೆ ಜಿಲ್ಲಾ ಮಟ್ಟದ ಭತ್ತ ಬೆಳೆ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಬಂಟ್ವಾಳ ತಾಲೂಕಿನ ಲೀಲಾ ಅಣ್ಣು ಗೌಡ ಹಾಗೂ ಡಾಲಿ ವಿ ಜೆ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ಕೃಷಿ ಸಖಿ, ಪಶು ಸಖಿಗಳಿಗೆ ಅಭಿನಂದಿಸಲಾಯಿತು. ತುಂತುರು ನೀರಾವರಿ ಯೋಜನೆಯಡಿ ಫಲಾನುಭವಿ ರೈತರಿಗೆ ವಿವಿಧ ಕೃಷಿ ಸಲಕರಣೆ ವಿತರಿಸಲಾಯಿತು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಸ್ವಾಗತಿಸಿ, ಕಟ್ಟಡ ಸಮಿತಿ ಅಧ್ಯಕ್ಷ ಕೆ ಪದ್ಮನಾಭ ರೈ ಕಲ್ಲಡ್ಕ ಪ್ರಸ್ತಾವನೆಗೈದರು. ಕೃಷಿಕ ಸಮಾಜದ ಉಪಾಧ್ಯಕ್ಷ ಬಿ ಉಮ್ಮರ್ ಮಂಚಿ ವಂದಿಸಿದರು. ಬಾಲಕೃಷ್ಣ ಆಳ್ವ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು.


















0 comments:
Post a Comment