ಬಂಟ್ವಾಳ, ಸೆಪ್ಟೆಂಬರ್ 04, 2025 (ಕರಾವಳಿ ಟೈಮ್ಸ್) : ಹಟ್ಟಿಯಲ್ಲಿ ಸಾಕಿದ್ದ ಹಸುವನ್ನು ಕದ್ದು ಅಲ್ಲೇ ಜಮೀನಿನಲ್ಲಿ ಹತ್ಯೆ ಮಾಡಿ ಮಾಂಸ ಕೊಂಡು ಹೋದ ಘಟನೆ ತಾಲೂಕಿನ ಪೆರ್ನೆ ಗ್ರಾಮದಲ್ಲಿ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಗೀತೇಶ್ ಕೆ (26) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರು ತನ್ನ ಮನೆಯಲ್ಲಿ ಒಂದು ಹಸುವನ್ನು ಸಾಕುತ್ತಿದ್ದು, ಸೆ 4 ರಂದು ಮಧ್ಯ ರಾತ್ರಿ ಸುಮಾರು 2.30 ರವರೆಗೂ ಮನೆಯ ಬಳಿ ಹಟ್ಟಿಯಲ್ಲಿದ್ದ ಹಸು, ಬೆಳಿಗ್ಗೆ 6.30 ಗಂಟೆಗೆ ನೋಡಿದಾಗ ಹಟ್ಟಿಯಲ್ಲಿ ಇಲ್ಲದೆ ಕಾಣೆಯಾಗಿರುತ್ತದೆ. ಕಾಣೆಯಾದ ಹಸುವನ್ನು ಇವರು ತನ್ನ ಕುಟುಂಬದೊಂದಿಗೆ ಸೇರಿ ಹುಡುಕಾಡಿದಾಗ, ಅವರದೇ ಜಮೀನಿನಲ್ಲಿ ಹಸುವಿನ ಚರ್ಮ, ಮೊದಲಾದ ಅಂಗಾಗಗಳು ಬಿಸಾಡಿರುವುದು ಕಂಡುಬಂದಿದೆ.
ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಹಸುವನ್ನು ಯಾರೋ ಕಳವು ಮಾಡಿಕೊಂಡು ಹೋಗಿ ಹಸುವನ್ನು ಹತ್ಯೆ ಮಾಡಿ ಮಾಂಸವನ್ನು ಅಲ್ಲಿಂದ ಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment