ಜಿ.ಎಸ್.ಟಿ. ವಿಧಿಸಿ, ಹೆಚ್ಚಿಸಿದ್ದೂ ಅವರೇ, ಇದೀಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ಳುವುದೇ ಅವರೇ, 8 ವರ್ಷ ವಿಪರೀತ ವಸೂಲು ಮಾಡಿದ್ದನ್ನು ಜನರಿಗೆ ವಾಪಸ್ ಕೊಡ್ತೀರಾ : ಮೋದಿ ಕಾಲೆಳೆದ ಸಿದ್ದು - Karavali Times ಜಿ.ಎಸ್.ಟಿ. ವಿಧಿಸಿ, ಹೆಚ್ಚಿಸಿದ್ದೂ ಅವರೇ, ಇದೀಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ಳುವುದೇ ಅವರೇ, 8 ವರ್ಷ ವಿಪರೀತ ವಸೂಲು ಮಾಡಿದ್ದನ್ನು ಜನರಿಗೆ ವಾಪಸ್ ಕೊಡ್ತೀರಾ : ಮೋದಿ ಕಾಲೆಳೆದ ಸಿದ್ದು - Karavali Times

728x90

22 September 2025

ಜಿ.ಎಸ್.ಟಿ. ವಿಧಿಸಿ, ಹೆಚ್ಚಿಸಿದ್ದೂ ಅವರೇ, ಇದೀಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ಳುವುದೇ ಅವರೇ, 8 ವರ್ಷ ವಿಪರೀತ ವಸೂಲು ಮಾಡಿದ್ದನ್ನು ಜನರಿಗೆ ವಾಪಸ್ ಕೊಡ್ತೀರಾ : ಮೋದಿ ಕಾಲೆಳೆದ ಸಿದ್ದು

ಬೆಂಗಳೂರು, ಸೆಪ್ಟೆಂಬರ್ 22, 2025 (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಡೋಂಗಿ. ಜಿಎಸ್‍ಟಿ ಜಾರಿ ಮಾಡಿದ್ದೂ ಅವರೇ, ಜಿಎಸ್‍ಟಿ ಹೆಚ್ಚೆಚ್ಚು ವಿಧಿಸಿದ್ದೂ ಅವರೇ, ಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ತಾ ಇರೋದೂ ಅವರೇ. ಹಾಗಾದರೆ ಇಷ್ಟು ವರ್ಷ ಹೆಚ್ಚು ಜಿಎಸ್‍ಟಿ ಹಾಕಿ ಜನರನ್ನು ಸುಲಿಗೆ ಮಾಡುವಾಗ ನಿಮ್ಮ ಈ ಕಾಳಜಿ ಎಲ್ಲಿಹೋಗಿತ್ತು? ಎಂಟು ವರ್ಷ ವಿಪರೀತ ಜಿಎಸ್‍ಟಿ ವಸೂಲಿ ಮಾಡಿದ್ರಲ್ಲಾ ಪ್ರಧಾನಿ ಮೋದಿಯವರೇ ಅದೆಲ್ಲವನ್ನೂ ಭಾರತೀಯರಿಗೆ ವಾಪಾಸ್ ಕೊಡ್ತೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದರು. 

ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಸೋಮವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಜಿಎಸ್‍ಟಿ 18%, 28% ಹೆಚ್ಚಿಸಿದ್ದರ ಬಗ್ಗೆ ವಿರೋಧ ಮಾಡಿದವರು ನಾವು. ಇಷ್ಟು ವರ್ಷ ವಸೂಲಿ ಮಾಡಿದವರೇ ಈಗ ಕ್ರೆಡಿಟ್ ತಗೊತಾ ಇದಾರೆ. ಭಾರತೀಯರಿಗೆ ಎಷ್ಟು ನಾಜೂಕಾಗಿ ಟೋಪಿ ಹಾಕ್ತಾರೆ ನೋಡಿ. £ೀವು ಇದಕ್ಕೆಲ್ಲಾ ಮರಳಾಗಬಾರದು ಎಂದರು. 

ಬಡವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಜಾರಿಗೆ ತಂದು 10 ಕೆಜಿ ಅಕ್ಕಿ ಕೊಟ್ಟಿದ್ದೇ ಈ ಸಿದ್ದರಾಮಯ್ಯ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ವಿರೋಧಿಸಿದವರಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ಸೋಲಾಯಿತು, “ನನ್ನ ಹೆಸರಲ್ಲೇ ಇಬ್ಬರು ದೇವರಿದ್ದಾರೆ. ಸಿದ್ದ ಅಂದರೆ ಶಿವ, ರಾಮ ಅಂದರೆ ವಿಷ್ಣು”, ನನಗೆ ದೇವರ ಬಗ್ಗೆ ಪ್ರೀತಿ, ಭಕ್ತಿ ಎಲ್ಲವೂ ಇದೆ. ಬೇರೆಯವರಂತೆ ದೇವರ ಹೆಸರಲ್ಲಿ ದ್ವೇಷ ಹರಡುವವರು ನಾವಲ್ಲ. ಹೀಗಾಗಿ ಬಾನು ಮುಷ್ತಾಕ್ ಗೆ ವಿರೋಧ ವ್ಯಕ್ತಪಡಿಸಿದ ಮೂರ್ಖರಿಗೆ ಸುಪ್ರೀಂಕೋರ್ಟ್ ಸಂವಿಧಾನದ ಪೀಠಿಕೆ ಓದಲು ಹೇಳಿದೆ ಎಂದ ಸಿಎಂ ಬಾನು ಮುಷ್ತಾಕ್ ಅವರಿಗೆ ಎರಡು ಬಾರಿ ಸಂಸದರಾಗಿದ್ದವರು ವಿರೋಧ ವ್ಯಕ್ತಪಡಿಸಿದ್ದರು. ದಸರಾ ನಾಡಹಬ್ಬ ಎನ್ನುವುದೂ ಕೂಡ ಗೊತ್ತಿಲ್ಲ ಅವರಿಗೆ. ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೋಗಿ ಸೋತರು. ನಾನು ಅವರಿಗಿಂತ ನೈಜ ಮತ್ತು ಉತ್ತಮ ಹಿಂದೂ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡರು. 

  • Blogger Comments
  • Facebook Comments

0 comments:

Post a Comment

Item Reviewed: ಜಿ.ಎಸ್.ಟಿ. ವಿಧಿಸಿ, ಹೆಚ್ಚಿಸಿದ್ದೂ ಅವರೇ, ಇದೀಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ಳುವುದೇ ಅವರೇ, 8 ವರ್ಷ ವಿಪರೀತ ವಸೂಲು ಮಾಡಿದ್ದನ್ನು ಜನರಿಗೆ ವಾಪಸ್ ಕೊಡ್ತೀರಾ : ಮೋದಿ ಕಾಲೆಳೆದ ಸಿದ್ದು Rating: 5 Reviewed By: karavali Times
Scroll to Top