ಬಂಟ್ವಾಳ, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : ಕಳೆದ ಮೂರು ವರ್ಷಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಇದೀಗ ಮಂಗಳೂರು ಅತ್ತಾವರ ಕೆಎಂಸಿ ಅಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ, ರಂಗ ನಿರ್ದೇಶಕ ಆಲದಪದವು ಗೋಪಾಲ ಅಂಚನ್ ಅವರಿಗೆ ವಿವಿಧ ಸಂಘಟನೆಗಳು ಆರ್ಥಿಕ ಸಹಕಾರ ನೀಡಿ ಕಷ್ಟದಲ್ಲಿ ಸ್ಪಂದಿಸಿದೆ.
ಬಂಟ್ವಾಳ ಬಿ ರಮಾನಾಥ ರೈ ಅಭಿಮಾನಿ ಬಳಗ, ವಿಟ್ಲ ಪ್ರೆಸ್ ಕ್ಲಬ್, ಆಸರೆ ಫ್ರೆಂಡ್ಸ್ ಕದ್ರಿ-ಮಂಗಳೂರು, ಮಂಗಳೂರು, ಕಂಕನಾಡಿ, ಪಡೀಲು ಲಯನ್ಸ್ ಕ್ಲಬ್, ಯುವವಾಹಿನಿ ( ರಿ) ಬಂಟ್ವಾಳ ತಾಲೂಕು ಘಟಕ ಸಂಸ್ಥೆಗಳು ಆರ್ಥಿಕ ನೆರವು ನೀಡಿದ್ದಾರೆ.
0 comments:
Post a Comment