ಬೆಂಗಳೂರು, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : ವರ್ಷದ 2ನೇ ಚಂದ್ರಗ್ರಹಣಕ್ಕೆ ಭಾನುವಾರ ರಾತ್ರಿ ನಭೋ ಮಂಡಲ ಸಾಕ್ಷಿಯಾಯಿತು. ವರ್ಷದ ಮೊದಲ ಚಂದ್ರಗ್ರಹಣವು ಈ ವರ್ಷದ ಮಾರ್ಚ್ ತಿಂಗಳಲ್ಲಿ ಸಂಭವಿಸಿದೆ.
ಭಾನುವಾರ ರಾತ್ರಿ (ಸೆ 7) ಜನ ಅಪರೂಪದ ‘ರಕ್ತ ಚಂದ್ರ’ ಅಥವಾ ಪೂರ್ಣ ಚಂದ್ರ ಗ್ರಹಣವನ್ನು ಭಾರೀ ಕುತೂಹಲದಿಂದ ಎಲ್ಲೆಡೆ ವೀಕ್ಷಿಸಿದರು. 2022ನೆ ಇಸವಿಯ ಬಳಿಕ ಇದು ಅತಿ ದೀರ್ಘಾವಧಿಯ, ಏಷ್ಯಾ, ಯುರೋಪ್ ಹಾಗೂ ಆಫ್ರಿಕಾದಾದ್ಯಂತ ಗೋಚರಿಸಿದ ಚಂದ್ರಗ್ರಹಣವಾಗಿದೆ.
ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಾಲಿನಲ್ಲಿ ಬಂದಾಗ ಗ್ರಹಣವು ತನ್ನ ಉಪಗ್ರಹದ ಮೇಲೆ ಬೀರುವ ನೆರಳು ಸಹಸ್ರಾರು ವರ್ಷಗಳಿಂದ ಮಾನವರನ್ನು ಬೆರಗುಗೊಳಿಸುತ್ತಿರುವ ವಿಲಕ್ಷಣ, ಗಾಢ ಕೆಂಪು ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ಈ ಅಪರೂಪದ ಖಗೋಳ ವಿಸ್ಮಯ ಭೂಮಿಯ ನೆರಳು ಚಂದ್ರನ ಮೇಲೆ ಸುಂದರವಾಗಿ ಮೂಡುವುದನ್ನು ವೀಕ್ಷಿಸಲು ಒಂದು ಅದ್ಭುತ ಅವಕಾಶವನ್ನು ನೀಡಿದೆ. ಈ ಗ್ರಹಣದ ಅವಧಿಯಲ್ಲಿ ಚಂದ್ರ ಹೊಳೆಯುವ ತಾಮ್ರದಂತೆ ಕೆಂಪು ವಸ್ತುವಾಗಿ ಕಾಣಿಸಿದ್ದಾನೆ.
ಭಾನುವಾರ ರಾತ್ರಿ 9:57 ರಿಂದ ಗ್ರಹಣ ಪ್ರಕ್ರಿಯೆ ಆರಂಭವಾಗಿದೆ. ಆರಂಭದಲ್ಲಿ ಬಿಳಿ ಬಣ್ಣದಲ್ಲಿ ಪೂರ್ಣ ಚಂದ್ರ ಗೋಚರವಾಗಿದ್ದು, ಬಳಿಕ ಕಿತ್ತಳೆ, ನಂತರ ಕೆಂಪು ವರ್ಣಕ್ಕೆ ಚಂದ್ರ ತಿರುಗಿದ್ದಾನೆ. ಇಸ್ರೇಲ್, ಜಪಾನ್, ಕೀನ್ಯಾ, ನಮೀಬಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ರಕ್ತ ಚಂದ್ರನ ದರ್ಶನವಾಗಿದೆ. ಯುಎಇ ದೇಶದಲ್ಲಿ ದಶಕಗಳ ಬಳಿಕ ಅತಿ ಉದ್ದದ ಚಂದ್ರಗ್ರಹಣ ದರ್ಶನವಾಗಿದೆ. ಬುರ್ಜ್ ಖಲಿಫಾದ ಹಿಂದೆ ಚಂದ್ರಗ್ರಹಣ ಕಾಣಿಸಿಕೊಂಡಿದೆ.
ಚಂದ್ರಗ್ರಹಣಗಳ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಏಕೆಂದರೆ ಅದನ್ನು ತಲುಪುವ ಏಕೈಕ ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಪ್ರತಿಫಲಿಸುತ್ತದೆ ಮತ್ತು ಚದುರಿಹೋಗುತ್ತದೆ ಎಂದು ಉತ್ತರ ಐರ್ಲೆಂಡ್‍ನ ಕ್ವೀನ್ಸ್ ವಿಶ್ವವಿದ್ಯಾಲಯದ ಬೆಲ್‍ಫಾಸ್ಟ್ ಇಲ್ಲಿನ ಖಗೋಳ ಭೌತ ಶಾಸ್ತ್ರಜ್ಞ ರಯಾನ್ ಮಿಲ್ಲಿಗನ್ ತಿಳಿಸಿದ್ದಾರೆ.
ನೀಲಿ ಬೆಳಕಿನ ತರಂಗಾಂತರಗಳು ಕೆಂಪು ಬಣ್ಣಕ್ಕಿಂತ ಚಿಕ್ಕದಾಗಿರುತ್ತವೆ, ಆದ್ದರಿಂದ ಅವು ಭೂಮಿಯ ವಾತಾವರಣದ ಮೂಲಕ ಚಲಿಸುವಾಗ ಸುಲಭವಾಗಿ ಚದುರಿಹೋಗುತ್ತವೆ. ಈ ಅವಧಿಯಲ್ಲಿ ಚಂದ್ರನಿಗೆ ಕೆಂಪು, ರಕ್ತಸಿಕ್ತ ಬಣ್ಣವನ್ನು ನೀಡುವುದು ಅದೇ ಕಾರಣಕ್ಕಾಗಿ ಎಂದವರು ಹೇಳಿದ್ದಾರೆ.
ಭಾನುವಾರದ (ಸೆ 7) ಗ್ರಹಣ 2022ರ ಬಳಿಕ ಭಾರತದಲ್ಲಿ ಗೋಚರಿಸಿದ ಅತಿ ದೀರ್ಘಾವಧಿಯ ಪೂರ್ಣ ಚಂದ್ರಗ್ರಹಣವಾಗಿದೆ. ಅದೇ ರೀತಿ 2018 ರ ಜುಲೈ 27ರ ಬಳಿಕ ದೇಶದ ಎಲ್ಲಾ ಭಾಗಗಳಿಂದ ವೀಕ್ಷಿಸಲಾದ ಮೊದಲನೆಯ ಚಂದ್ರಗ್ರಹಣವಾಗಿದೆ ಎನ್ನಲಾಗಿದೆ.
ದೇಶದ ಹಲವಾರು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದುದರಿಂದ ಹಲವು ಕಡೆ ಕೆಂಪು ಚಂದ್ರನನ್ನು ನೋಡುವ ಅವಕಾಶ ತಪ್ಪಿ ಹೋಗಿದ್ದು, ಜನರಿಗೆ ನಿರಾಸೆ ಮೂಡಿಸಿದೆ. ಆದರೆ ಪ್ರಪಂಚದಾದ್ಯಂತದ ಖಗೋಳ ಶಾಸ್ತ್ರಜ್ಞರು ನೇರ ಪ್ರಸಾರಗಳನ್ನು ಮಾಡಿದ ಕಾರಣ ಜನರ ನಿರಾಸೆಯನ್ನು ಕೊಂಚ ಕಡಿಮೆ ಮಾಡಿದೆ.
0 comments:
Post a Comment