ಬಂಟ್ವಾಳ, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಬಂಟರ ಸಂಘದ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಸುಜಾತ ಪಿ ರೈ ಕಲ್ಲಡ್ಕ ಅವರು ಜಯಸಾಧಿಸಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಜಾತ ಪಿ ರೈ ಹಾಗೂ ಸಂಧ್ಯಾ ರೈ ಬೆಳ್ಳೂರು ಅವರು ಸ್ಪರ್ಧಿಸಿದ್ದರು. ಸುಜಾತ ಪಿ ರೈ ಅವರು ಗೆಲುವು ಸಾಧಿಸುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಸುಜಾತ ರೈ ಹಿಂದಿನ ಬಾರಿ ಸಮಿತಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಉಳಿದಂತೆ ಉಪಾಧ್ಯಕ್ಷರಾಗಿ ಜ್ಯೋತಿ ರೈ ಮಾಣಿ, ಕಾರ್ಯದರ್ಶಿಯಾಗಿ ಮಂದಾರತಿ ಶೆಟ್ಟಿ ಸಿದ್ದಕಟ್ಟೆ, ಕೋಶಾಧಿಕಾರಿಯಾಗಿ ರೂಪ ಅರಳ, ಜೊತೆ ಕೋಶಾಧಿಕಾರಿಯಾಗಿ ಶೋಭಾ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment