ಮಂಗಳೂರು, ಸೆಪ್ಟೆಂಬರ್ 20, 2025 (ಕರಾವಳಿ ಟೈಮ್ಸ್) : ಮೂಲ್ಕಿ-ಕಾರ್ನಾಡು ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಮುಲ್ಕಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುರತ್ಕಲ್ ಸಮೀಪದ ಕಾಟಿಪಳ್ಳ-ಕೃಷ್ಣಾಪುರ ನಿವಾಸಿ ದಿವಂಗತ ಲಕ್ಷ್ಮಣ ಎಂಬವರ ಪುತ್ರ ಯತಿರಾಜ್ (27) ಎಂದು ಹೆಸರಿಸಲಾಗಿದೆ. ಬಂಧಿತ ಆರೋಪಿಯಿಂದ 1 ಕೆಜಿ 200 ಗ್ರಾಂ ಗಾಂಜಾ, ಅಟೋ ರಿಕ್ಷಾ ಹಾಗೂ 300 ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮುಲ್ಕಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ 14 ರಂದು ಮಾದಕ ವಸ್ತು (ಗಾಂಜಾ) ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಕಿ ದಸ್ತಗಿರಿಯಾಗಿದ್ದ ಮುಲ್ಕಿ-ಕಾಪಿಕಾಡು ನಿವಾಸಿ ಪ್ರಜ್ವಲ್ (25), ಬೈಕಂಪಾಡಿ-ಕೋರಿಕಟ್ಟ್ ನಿವಾಸಿ ಪ್ರಮೋದ್ (22) ಹಾಗೂ ಸ್ಟೀವನ್ (29) ಎಂಬವರ ಮುಂದುವರಿದ ತನಿಖೆಯಿಂದ ಆರೋಪಿ ಯತಿರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
0 comments:
Post a Comment