ಪುತ್ತೂರು, ಸೆಪ್ಟೆಂಬರ್ 20, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಂತ ಹಳೆಯ ಪ್ರಕರಣದ ಆರೋಪಿಯೊಬ್ಬನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಕಳೆದ 55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಜಿಲ್ಲೆಯ ನಿವಾಸಿ ಸಿ ಆರ್ ಚಂದ್ರನ್ (78) ಎಂಬಾತನನ್ನು ಪೊಲೀಸರು ಕ್ಯಾಲಿಕಟ್ ಸಮೀಪದ ಪುಲ್ಲಿಕಲ್ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
1970 ರ ಜುಲೈ 26 ರಂದು ಗಂಧದ ಮರಗಳ ತುಂಡುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಕಾರಿನಲ್ಲಿ ಕಳ್ಳಸಾಗಾಟ ಮಾಡುತ್ತಿದ್ದ ಸಂದರ್ಭ ಬುಲ್ಲೇರಿಕಟ್ಟೆ ಚೆಕ್ ಪೆÇೀಸ್ಟಿನಲ್ಲಿ ತಡೆದು ನಿಲ್ಲಿಸಿದ ಪೊಲೀಸರು ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 32/1970 ಕಲಂ 154, 155(2) ಎಂ ಎಫ್ ರೂಲ್ಸ್ 1969 ಕಲಂ 86 ಆಫ್ ಎಂ ಎಫ್ ಆಕ್ಟ್ (ಎಲ್ ಪಿ ಸಿ 2/1972) ಪ್ರಕರಣದಲ್ಲಿ ಎಲ್ ಪಿ ಸಿ ವಾರಂಟ್ ಆಸಾಮಿಯಾಗಿದ್ದ ಈತ 55 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳಲ್ಲಿ ಅತ್ಯಂತ ಹಳೆಯ ಪ್ರಕರಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment