ಮಂಗಳೂರು, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಯಾಗಿ ಸತೀಶ್ ಪೆಂಗಲ್ ನೇಮಕಗೊಂಡಿದ್ದಾರೆ.
ಇವರು ಮಂಗಳೂರು ಉತ್ತರ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ, ಪೆÇ್ರಸ್ಟೆಸ್ಟೆಂಟ್ ಕ್ರಿಶ್ಚಿಯನ್ ವೇಲ್ಪೇರ್ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷರಾಗಿ, ಪ್ರೆಂಡ್ ಇನ್ ನೀಡ್ ಸೊಸೈಟಿ ಬಲ್ಮಠ, ಮಂಗಳೂರು ಇದರ ನಿರ್ದೇಶಕರಾಗಿ, ಜೈಹಿಂದ್ ಯುವಕ ಮಂಡಲ ಬೊಕ್ಕಪಟ್ಣ ಮಂಗಳೂರು ಇದರ ಕಮಿಟಿ ಸದಸ್ಯರಾಗಿ ಬಿ.ಇ.ಯಂ. ವಿದ್ಯಾಸಂಸ್ಥೆ ಕಾರ್ ಸ್ಟ್ರೀಟ್-ಮಂಗಳೂರು ಇದರ ಅಡಳಿತ ಮಂಡಳಿಯ ಸದಸ್ಯರಾಗಿ, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್ ಅಭಿವೃದ್ದಿ ಸಮಿತಿಯ ಸದಸ್ಯರಾಗಿ, ಮಂಗಳೂರು ಮಹಾನಗರಪಾಲಿಕೆಯ ನಾಮನಿರ್ದೇಶನ ಕಾಫೆರ್Çರೇಟರ್ ಆಗಿ ಹಾಗೂ ಅನೇಕ ಸಾಮಾಜಿಕ ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸತೀಷ್ ಪೆಂಗಲ್ ಅವರನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಶಿಫಾರಸ್ಸಿನ ಮೇರೆಗೆ ಅಖಿಲ ಭಾರತ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಇಮ್ರಾನ್ ಪ್ರತಾಪ್ ಘರ್ ಎಂ.ಪಿ. ಇವರ ನಿರ್ದೇಶನದಂತೆ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ ಅಬ್ದುಲ್ ಜಬ್ಬಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
0 comments:
Post a Comment