ಮಂಗಳೂರು, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : 2019ರಲ್ಲಿ ಸಮುದ್ರದ ಬದಿಗೆ ಮೀನು ಹಿಡಿಯಲು ಹೋದ ಸಂದರ್ಭ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದ ಮಹಮ್ಮದ್ ಸಾಹಿಲ್ ಅವರಿ ಮಂಜೂರಾದ 6 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಅವರ ತಂದೆ ಮಹಮ್ಮದ್ ಅಲ್ತಾಫ್ ಬೆಂಗ್ರೆ ಅವರಿಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರು ವಿತರಿಸಿದರು.
ಸಮುದ್ರದ ಬದಿಗೆ ಮೀನು ಹಿಡಿಯಲು ಹೋದ ಸಂದರ್ಭ ಸಮುದ್ರದ ನೀರಿನಲ್ಲಿ ಮುಳುಗಿ ಮಹಮ್ಮದ್ ಸಾಹಿಲ್ ಆರು ವರ್ಷಗಳ ಹಿಂದೆ ಸಾವನಪ್ಪಿದ್ದು, ಈ ಪ್ರಕಟಣದಲ್ಲಿ ಪರಿಹಾರ ನೀಡಬೇಕೆಂದು ಕಳೆದ ಕೆಡಿಪಿ ಸಭೆಯಲ್ಲಿ ಚರ್ಚಿಸಿ, ನಿಧನರಾದವರು ಮೈನರ್ ಎಂಬ ಕಾರಣಕ್ಕಾಗಿ ಅವರಿಗೆ ಪರಿಹಾರ ನೀಡದೇ ಇದ್ದುದನ್ನು ಮನಗಂಡು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಕೆಡಿಪಿ ಸಭೆಯಲ್ಲಿ ಪರಿಹಾರ ನೀಡಲೇಬೇಕೆಂದು ಒತ್ತಾಯಿಸಿದಾಗ ಈ ಬಗ್ಗೆ ಆದ ತೀರ್ಮಾನದಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನಿರ್ದೇಶನದಂತೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರ ಗಮನಕ್ಕೆ ತಂದಿದ್ದರು. ಐವನ್ ಅವರ ಒತ್ತಾಯದ ಮೇರೆಗೆ ಇಂದು ಪರಿಹಾರ ಧನ ಮಂಜೂರಾಗಿದ್ದು, ಅದನ್ನು ಮಹಮ್ಮದ್ ಸಾಹಿಲ್ ಅವರ ಮನೆಗೆ ತೆರಳಿ ಅವರ ತಂದೆ ಮಹಮ್ಮದ್ ಅಪ್ತಾಫ್ ಬೆಂಗ್ರೆ ಅವರಿಗೆ ವಿತರಿಸಲಾಗಿದೆ.
ಈ ಸಂದರ್ಭ ಮೀನುಗಾರಿಕಾ ಇಲಾಖೆಯ ಉಪನಿರ್ದೇಶ ದಿಲೀಪ್ ನಾಗರಾಜ್, ಮೊಗವೀರ್ ಮಹಾಜನ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅಬೂಬಕ್ಕರ್, ಫಯಾಜ್ ಬೆಂಗ್ರೆ, ಮನುರಾಜ್, ಭಾಸ್ಕರ್ ರಾವ್, ಮಾಜಿ ಕಾಪೆರ್Çೀರೇಟರ್ ಸ್ಟೀಫನ್ ಮರೋಳಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment