ಸೆಪ್ಟೆಂಬರ್ 22 ರಂದು ಮಂಚಿ ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮಸಭೆ - Karavali Times ಸೆಪ್ಟೆಂಬರ್ 22 ರಂದು ಮಂಚಿ ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮಸಭೆ - Karavali Times

728x90

4 September 2025

ಸೆಪ್ಟೆಂಬರ್ 22 ರಂದು ಮಂಚಿ ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮಸಭೆ

ಬಂಟ್ವಾಳ, ಸೆಪ್ಟೆಂಬರ್ 04, 2025 (ಕರಾವಳಿ ಟೈಮ್ಸ್) : ಮಂಚಿ ಗ್ರಾಮ ಪಂಚಾಯತ್ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಸೆಪ್ಟೆಂಬರ್ 22 ರಂದು ಸೋಮವಾರ ಪೂರ್ವಾಹ್ನ 10.30ಕ್ಕೆ ಪಂಚಾಯತ್ ಸಭಾಂಗಣದಲ್ಲಿ ನೋಡಲ್ ಅಧಿಕಾರಿ ಬಂಟ್ವಾಳ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಸಮಕ್ಷಮದಲ್ಲಿ ನಡೆಯಲಿದೆ. 

ಈ ಪ್ರಯುಕ್ತ ಸೆಪ್ಟೆಂಬರ್ 10 ರಂದು ಬುಧವಾರ ಹಾಗೂ 11 ರಂದು ಗುರುವಾರ ವಾರ್ಡ್ ಸಭೆಗಳು ಕ್ರಮವಾಗಿ ಗ್ರಾಮ ಪಂಚಾಯತ್ ಸಭಾ ಭವನ (ಸೆ 10 ರಂದು ಬೆಳಿಗ್ಗೆ 11 ಗಂಟೆಗೆ), ಕಾಡಂಗಡಿ ಅಂಗನವಾಡಿ ಕೇಂದ್ರ (ಸೆ 10 ರಂದು ಅಪರಾಹ್ನ 3 ಗಂಟೆಗೆ), ನಾಡಾಜೆ ಅಂಗನವಾಡಿ ಕೇಂದ್ರ (ಸೆ 11 ರಂದು ಬೆಳಿಗ್ಗೆ 11 ಗಂಟೆಗೆ) ಹಾಗೂ ಪುದ್ದೋಟು ಅಂಗನವಾಡಿ ಕೇಂದ್ರ (ಸೆ 11 ರಂದು ಅಪರಾಹ್ನ 3 ಗಂಟೆಗೆ) ಗಳಲ್ಲಿ ನಡೆಯಲಿದೆ ಎಂದು ಪಂಚಾತ್ ಅಧ್ಯಕ್ಷ ಜಿ ಎಂ ಇಬ್ರಾಹಿಂ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸೆಪ್ಟೆಂಬರ್ 22 ರಂದು ಮಂಚಿ ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮಸಭೆ Rating: 5 Reviewed By: karavali Times
Scroll to Top