ಬಂಟ್ವಾಳ, ಸೆಪ್ಟೆಂಬರ್ 07, 2025 (ಕರಾವಳಿ ಟೈಮ್ಸ್) : ತಾಲೂಕಿನ ವಾಮದಪದವು ಸಮೀಪದ ಆಲದಪದವು ನೂರುಲ್ ಇಸ್ಲಾಂ ಮದರಸ ಮತ್ತು ಅಲ್-ಬದ್ರಿಯಾ ಮಸ್ಜಿದ್ ವತಿಯಿಂದ ಅಂತ್ಯ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ 1500ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಮಸೀದಿ ಅಧ್ಯಕ್ಷ ಹಂಝ ಬಸ್ತಿಕೋಡಿ ಅವರ ಅಧ್ಯಕ್ಷತೆಯಲ್ಲಿ ಮದ್ರಸ ವಠಾರದಲ್ಲಿ ಶನಿವಾರ ನಡೆಯಿತು.
ಅಬೂಬಕ್ಕರ್ ಸಿದ್ದೀಕ್ ಹಮದಾನಿ ಉದ್ಘಾಟಿಸಿದರು. ಮಾವಿನಕಟ್ಟೆ ಮಸೀದಿ ಖತೀಬ್ ಮಹಮ್ಮದ್ ನಾಸಿರ್ ಅಹ್ಸನಿ ದುವಾ ನೆರವೇರಿಸಿದರು.
ಇದೇ ವೇಳೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾದ ಸಹ್ಯಾದ್ರಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ ಮುಸ್ತಫಾ ಬಸ್ತಿಕೋಡಿ ಅವರನ್ನು ಸನ್ಮಾನಿಸಲಾಯಿತು.
ಅಶ್ಫಾಕ್ ಸಖಾಫಿ, ಅಶ್ರಫ್ ಮದನಿ, ಅಬ್ದುಲ್ ರಝಾಕ್ ಎಲ್ಪೇಲ್, ಉಮರ್ ಫಾರೂಕ್ ಬಸ್ತಿಕೋಡಿ, ಸಿರಾಜ್ ಬಸ್ತಿಕೋಡಿ, ಇಮ್ರಾನ್ ಬಸ್ತಿಕೋಡಿ, ಪುತ್ತುಮೋನು ನಡಾಯಿ, ಆದಂ ಆಲದಪದವು, ಹಾಜಿ ಅಬ್ದುಲ್ ರಹಿಮಾನ್ ಬಸ್ತಿಕೋಡಿ, ಅಬ್ಬಾಸ್ ಬಸ್ತಿಕೋಡಿ, ಬಶೀರ್ ಬಸ್ತಿಕೋಡಿ, ಹಮೀದ್ ಆಲದಪದವು, ಬಶೀರ್ ಸಾಹೇಬ್, ಹಾಜಿ ಮೊಹಮ್ಮದ್ ಕರಂಕಿಲ, ಉಸ್ಮಾನ್ ನಡಾಯಿ, ಹಾರಿಸ್ ಬಸ್ತಿಕೋಡಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment