ಪುತ್ತೂರು, ಸೆಪ್ಟೆಂಬರ್ 07, 2025 (ಕರಾವಳಿ ಟೈಮ್ಸ್) : ಮಠಂತಬೆಟ್ಟು ಶ್ರೀ ಮಹಿಷ ಮರ್ಧಿನಿ ದೇವಿಗೆ ಸ್ವರ್ಣ ಕವಚ ನಿರ್ಮಾಣಕ್ಕೆ ಪ್ರಥಮ ದೇಣಿಗೆಯನ್ನು ಪುತ್ತೂರು ಶಾಸಕ ಅಶೋಕ್ ರೈ ಕುಟುಂಬ ಸಮರ್ಪಿಸಿತು.
ದೇವಸ್ಥಾನದ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮ ಹಾಗೂ ಪೂಜಾ ವಿಧಿ ವಿಧಾನಗಳ ಬಳಿಕ ಶಾಸಕರು ದೇಣಿಗೆಯನ್ನು ಸಮರ್ಪಿಸಿದರು. ಈ ಸಂದರ್ಭ ಸುಮಾ ಅಶೋಕ್ ರೈ, ಶಾಸಕರ ಪುತ್ರಿ ಡಾ ರಿಧಿ ರೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ಚರ ಭಟ್, ಕೋಡಿಂಬಾಡಿ ಗ್ರಾ ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಸಮಿತಿ ಸದಸ್ಯರಾದ ರಾಮಕೃಷ್ಣ ಭಟ್, ರೇಣುಕಾ, ಕೇಶವ ಭಂಡಾರಿ, ಕುಮಾರನಾಥ ಎಸ್, ಸತೀಶ್ ನಾಯ್ಕ್ ಮೋನಡ್ಕ, ದೇವುದಾಸ್ ಗೌಡ, ವಿಜಯ ನಾಯ್ಕ, ಯಮುನಾ ಡೆಕ್ಕಾಜೆ ವ್ಯವಸ್ಥಾಪಕ ಸಂತೋಷ್ ರೈ, ವಿಕ್ರಂ ಶೆಟ್ಟಿ, ಜಗನ್ನಾಥ ಶೆಟ್ಟಿ ನಡುಮನೆ ಮೊದಲಾದವರು ಭಾಗವಹಿಸಿದ್ದರು. ಅರ್ಚಕರಾದ ರಾಮಕೃಷ್ಣ ಭಟ್ ಪೂಜಾ ವಿಧಾನ ನೆರವೇರಿಸಿದರು.
0 comments:
Post a Comment