ಬಂಟ್ವಾಳ, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಹಝ್ರತ್ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ 1500ನೇ ಜನ್ಮದಿನದ ಅಂಗವಾಗಿ ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ, ತಹ್ಲೀಮುಲ್ ಇಸ್ಲಾಂ ಮದ್ರಸ ಹಾಗೂ ಸುನ್ನೀ ಯುವಜನ ಫೆಡರೇಶನ್ (ಎಸ್ ವೈ ಎಫ್) ವತಿಯಿಂದ ಮೀಲಾದುನ್ನಭೀ ಸಂಭ್ರಮ ಹಾಗೂ ನೆಬಿದಿನ ಸ್ವಲಾತ್ ಮೆರವಣಿಗೆಯು ಶುಕ್ರವಾರ ನಡೆಯಿತು.
ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಉಸ್ತಾದ್ ದುವಾ ನೆರವೇರಿಸಿದರು. ಸ್ವಲಾತ್ ಮೆರವಣಿಗೆ ಆಲಡ್ಕ ಮಸೀದಿಯಿಂದ ಹೊರಟು ನಂದಾವರಕ್ಕೆ ತೆರಳಿ ವಾಪಾಸು ಮಸೀದಿ ವಠಾರದಲ್ಲಿ ಸಮಾಪ್ತಿಗೊಂಡಿತು. ನೆಬಿದಿನ ಪ್ರಯುಕ್ತ ಕಳೆದ 3 ದಿನಗಳ ಕಾಲ ಮದ್ರಸ ವಿದ್ಯಾರ್ಥಿಗಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
0 comments:
Post a Comment