ಬಂಟ್ವಾಳ, ಸೆಪ್ಟೆಂಬರ್ 25, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಪಿ ಎಲ್ ಡಿ ಬ್ಯಾಂಕಿನ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ 24 ರಂದು ಬಿ ಸಿ ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಬ್ಯಾಂಕ್ ಆಡಳಿತಾಧಿಕಾರಿ ಶ್ರೀಮತಿ ತ್ರಿವೇಣಿ ರಾವ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ವ್ಯವಸ್ಥಾಪಕ ಕುಮಾರ ಮುಟಗಾರ್ ವಾರ್ಷಿಕ ವರದಿ ವಾಚಿಸಿದರು. ಬ್ಯಾಂಕ್ 31.03.2025 ರ ಅಂತ್ಯಕ್ಕೆ 53.59 ಲಕ್ಷ ಕ್ಷೇಮ ನಿಧಿ ಮತ್ತು 177.89 ಲಕ್ಷ ಇತರ ನಿಧಿ ಹಾಗೂ 1902.52 ಲಕ್ಷ ಠೇವಣಿಯನ್ನು ಹೊಂದಿರುತ್ತದೆ. 98 ಕೋಟಿ ರೂಪಾಯಿ ವ್ಯವಹಾರ ನಡೆಸಿರುತ್ತದೆ. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಪಡೆದ ಸಾಲ ಹೊರ ಬಾಕಿ 1181.32 ಲಕ್ಷ ಆಗಿದ್ದು, ದಿನಾಂಕ 31.03.2025ಕ್ಕೆ ಸಂದಾಯವಾಗಬೇಕಿದ್ದ ಕ.ರಾ.ಸ.ಕೃ ಮತ್ತು ಗ್ರಾ.ಅ ಬ್ಯಾಂಕಿನ ತಗಾದೆಯನ್ನು ಸಂಪೂರ್ಣ ಮರು ಪಾವತಿಸಲಾಗಿದೆ.
ಪ್ರಸ್ತುತ 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ 1641.44 ಲಕ್ಷ ಸಾಲ ವಿತರಿಸಿರುತ್ತದೆ. 2024-25 ರಲ್ಲಿ ನಬಾರ್ಡ್ ಯೋಜನೆಯಡಿ 595 ಸದಸ್ಯರಿಗೆ 536.04 ಲಕ್ಷ ಕೃಷಿ ಸಾಲ ಮತ್ತು ಸ್ವಂತ ಬಂಡವಾಳ ಯೋಜನೆಯಲ್ಲಿ 768 ಸದಸ್ಯರಿಗೆ ಕೃಷಿ ಹಾಗೂ ಕೃಷಿಯೇತರ ಯೋಜನೆಗಳಲ್ಲಿ 806.88 ಲಕ್ಷ ಸಾಲ ವಿತರಿಸಿದೆ.
2024-25ನೇ ಸಾಲಿನಲ್ಲಿ 425.12 ಲಕ್ಷ ವಸೂಲಿ ತಗಾದೆ ಹೊಂದಿದ್ದು, ಆ ಪೈಕಿ 385.75 ಲಕ್ಷ ವಸೂಲಿ ಮಾಡಿ ಶೇಕಡಾ 90.74% ವಸೂಲಾತಿ ಸಾಧನೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಪ್ರಸ್ತುತ 2024-25ನೇ ಸಾಲಿನಲ್ಲಿ ಬ್ಯಾಂಕು 40.06 ಲಕ್ಷ ಲಾಭ ಗಳಿಸಿದೆ. 7.50% ಡಿವಿಡೆಂಡ್ (ಪಾಲು ಮುನಾಫೆ) ತನ್ನ ಸದಸ್ಯರಿಗೆ ನೀಡಲು ನಿರ್ಧರಿಸಲಾಯಿತು.
0 comments:
Post a Comment