ಕೊನೆಗೂ ನಿಗಮ-ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷಗಿರಿ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ - Karavali Times ಕೊನೆಗೂ ನಿಗಮ-ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷಗಿರಿ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ - Karavali Times

728x90

25 September 2025

ಕೊನೆಗೂ ನಿಗಮ-ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷಗಿರಿ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ

ಬೆಂಗಳೂರು, ಸೆಪ್ಟೆಂಬರ್ 25, 2025 (ಕರಾವಳಿ ಟೈಮ್ಸ್) : ರಾಜ್ಯ ಸರ್ಕಾರ ಕೊನೆಗೂ ನಿಗಮ-ಮಂಡಳಿಗಳ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಪಟ್ಟಿಯನ್ನು ಸೆ 24 ರಂದು ಬಿಡುಗಡೆ ಮಾಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬುಧವಾರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. 


ಅಧ್ಯಕ್ಷರ ಪಟ್ಟಿ ಕೆಳಗಿನಂತಿದೆ : 


ಪಿ. ರಘು - ಸಫಾಯಿ ಕರ್ಮಚಾರಿ ಆಯೋಗ

ಅರುಣ್ ಪಾಟೀಲ್ - ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ

ಶಿವಲೀಲಾ ವಿನಯ್ ಕುಲಕರ್ಣಿ - ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ವಡ್ನಾಳ್ ಜಗದೀಶ್ - ಜೀವ ವೈವಿಧ್ಯ ಮಂಡಳಿ

ಮುರಳಿ ಅಶೋಕ್ - ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

ಡಾ. ಮೂರ್ತಿ - ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ

ಮಲ್ಲಿಕಾರ್ಜುನ್ - ಮಾಜಿ ಸೈನಿಕರ ಕಲ್ಯಾಣ ಮಂಡಳಿ

ಡಾ. ಬಿ.ಸಿ. ಮುದ್ದುಗಂಗಾಧರ್ - ಮಾವು ಅಭಿವೃದ್ಧಿ ನಿಗಮ

ಶಾಲೆಟ್ ಪಿಂಟೋ - ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

ಮರಿಯೋಜಿ ರಾವ್ - ಮರಾಠ ಅಭಿವೃದ್ಧಿ ನಿಗಮ

ಎಂ.ಎ. ಗಫೂರ್ - ಕರಾವಳಿ ಅಭಿವೃದ್ಧಿ ಪ್ರಾಧಿಕಾರ

ಕೆ. ಹರೀಶ್ ಕುಮಾರ್ - ಮೆಸ್ಕಾಂ

ಎನ್. ಸಂಪಂಗಿ - ಕರ್ನಾಟಕ ವೇರ್ ಹೌಸಿಂಗ್ ಕಾಪೆರ್Çರೇಷನ್

ವೈ. ಸಯೀದ್ ಅಹ್ಮದ್ - ದೇವರಾಜ ಅರಸು ಟ್ರಕ್ ಟರ್ಮಿನಲ್

ಮಹೇಶ್ - ಕಾಡುಗೊಲ್ಲ ಅಭಿವೃದ್ಧಿ ನಿಗಮ

ಮಂಜಪ್ಪ - ಬಯಲು ಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ

ಧರ್ಮಣ್ಣ ಉಪ್ಪಾರ - ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ

ಅಗಾ ಸುಲ್ತಾನ್ - ಕೇಂದ್ರ ಪರಿಹಾರ ಸಮಿತಿ

ಎಸ್.ಜಿ. ನಂಜಯ್ಯನಮಠ - ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ

ಆಂಜನಪ್ಪ - ಬೀಜ ಅಭಿವೃದ್ಧಿ ನಿಗಮ ನಿಯಮಿತ

ನೀಲಕಂಠ ಮುಳ್ಗೆ - ಕಲ್ಯಾಣ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ

ಬಾಬು ಹೊನ್ನಾ ನಾಯ್ಕ್ - ಕಾಡಾ, ಭೀಮರಾಯನಗುಡಿ, ಕಲಬುರಗಿ

ಯುವರಾಜ್ ಕದಂ - ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ, ಬೆಳಗಾವಿ

ಅನಿಲ್ ಕುಮಾರ್ ಜಾಮಬಾರ್ - ತೊಗರಿಬೇಳೆ ಅಭಿವೃದ್ಧಿ ನಿಗಮ, ಕಲಬುರಗಿ

ಪ್ರವೀಣ್ ಹರ್ವಾಲ್ - ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)

ಮಂಜುನಾಥ ಪೂಜಾರಿ - ನಾರಾಯಣ ಗುರು ಅಭಿವೃದ್ಧಿ ನಿಗಮ

ಸೈಯದ್ ಮೊಹಮೂದ್ ಚಿಸ್ಟಿ - ಬೇಳೆ ಕಾಳುಗಳ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ

ಎಂ.ಎಸ್. ಮುತ್ತುರಾಜ್ - ಸವಿತಾ ಸಮಾಜ ಅಭಿವೃದ್ಧಿ ನಿಗಮ

ನಂಜಪ್ಪ - ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ

ವಿಶ್ವಾಸ್ ದಾಸ್ - ಗಾಣಿಗ ಅಭಿವೃದ್ಧಿ ನಿಗಮ

ಆರ್.ಎಸ್. ಸತ್ಯನಾರಾಯಣ - ರಾಜ್ಯ ಮದ್ಯಪಾನ ಸಂಯಮ ಮಂಡಳಿ

ಗಂಗಾಧರ್ - ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್

ಶಿವಪ್ಪ - ಹಾಸನ ನಗರಾಭಿವೃದ್ಧಿ ಪ್ರಾಧಿಕಾರ

ಬಿ.ಎಸ್. ಕವಲಗಿ - ನಿಂಬೆ ಅಭಿವೃದ್ಧಿ ಮಂಡಳಿ

ಡಾ. ಶ್ರೀನಿವಾಸ ವೇಲು - ಕುಂಬಾರ ಅಭಿವೃದ್ಧಿ ನಿಗಮ

ಟಿ.ಎಂ. ಶಹೀದ್ ತೆಕ್ಕಿಲ್ - ರಾಜ್ಯ ಕನಿಷ್ಠ ವೇತನ ಮಂಡಳಿ

ಚೇತನ್ ಕೆ. ಗೌಡ - ಕೈಮಗ್ಗ ಅಭಿವೃದ್ಧಿ (ಪವರ್‍ಲೂಮ್) ಮಂಡಳಿ

ಶರಣಪ್ಪ ಸಲಾದ್‍ಪುರ್ - ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಅಭಿವೃದ್ಧಿ ಮಂಡಳಿ

ಲಾವಣ್ಯ ಬಲ್ಲಾಳ್ ಜೈನ್ - ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಿ ಕೆ.ಸಿ. ವೇಣುಗೋಪಾಲ್ ಅವರಿಗೆ ಸಲ್ಲಿಸಿದ್ದರು. ಅವರು ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಟ್ಟಿ ರವಾನಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಪಟ್ಟಿಗೆ ಅನುಮೋದನೆ ನೀಡಿದ ಬಳಿಕ, ಪಟ್ಟಿಯನ್ನು ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ. ಬಿಹಾರ ಪ್ರವಾಸದಿಂದ ಮುಖ್ಯಮಂತ್ರಿ ಹಿಂದಿರುಗಿದ ತಕ್ಷಣ ಅವರ ಸೂಚನೆಯಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನೇಮಕಾತಿ ಆದೇಶ ಹೊರಡಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊನೆಗೂ ನಿಗಮ-ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷಗಿರಿ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ Rating: 5 Reviewed By: karavali Times
Scroll to Top