ಬಂಟ್ವಾಳ, ಸೆಪ್ಟೆಂಬರ್ 23, 2025 (ಕರಾವಳಿ ಟೈಮ್ಸ್) : ಪೊಲೀಸ್ ಇಲಾಖೆಯ ಬೊಲೆರೋ ಜೀಪ್ ವಾಹನಕ್ಕೆ ಆಕ್ಟಿವಾ ಹೋಂಡಾ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಪಿಲಾತಬೆಟ್ಟು ಗ್ರಾಮದ ಕಟ್ಟೆಮನೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಗೊಂಡ ಆಕ್ಟಿವಾ ಸವಾರನನ್ನು ಪಿಲಾತಬೆಟ್ಟು ಗ್ರಾಮದ ನಿವಾಸಿ ಹರ್ಷಿತ್ (19) ಎಂದು ಹೆಸರಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಪಿಎಸ್ಸೈ ಅವರು ಮಂಗಳೂರು ನ್ಯಾಯಾಲಯಕ್ಕೆ ಇಲಾಖಾ ಬೊಲೆರೋ ಜೀಪಿನಲ್ಲಿ ಚಾಲಕನೊಂದಿಗೆ ಹೋಗುತ್ತಿದ್ದ ಸಂದರ್ಭ ಪಿಲಾತಬೆಟ್ಟು ಗ್ರಾಮದ ಕಟ್ಟೆಮನೆ ರಾಷ್ಟ್ರೀಯ ಹೆದ್ದಾರಿ-73 ರಲ್ಲಿ ಆಕ್ಟಿವಾ ಹೋಂಡಾ ಸವಾರ ಹರ್ಷಿತ್ ಎಂಬವರು ಬಿ ಸಿ ರೋಡ್ ಕಡೆಯಿಂದ ಪೂಂಜಾಲಕಟ್ಟೆ ಕಡೆಗೆ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಪಿಲಾತಬೆಟ್ಟು ಗ್ರಾಮದ ಕಟ್ಟೆಮನೆ ತಿರುವಿನಲ್ಲಿ ಸವಾರನ ನಿಯಂತ್ರಣ ತಪ್ಪಿ ಇಲಾಖಾ ಬೊಲೆರೋ ಜೀಪ್ ವಾಹನಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಆಕ್ಟಿವಾ ಹೋಂಡಾ ಸಮೇತ ರಸ್ತೆಗೆ ಬಿದ್ದ ಹರ್ಷಿತ್ ಅವರ ತಲೆಗೆ ಗಾಯವಾಗಿದ್ದು, ಅವರನ್ನು ಅಂಬ್ಯುಲೆನ್ಸ್ ಮೂಲಕ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ.
0 comments:
Post a Comment