ಪುತ್ತೂರು ಕ್ಷೇತ್ರದ 10 ಕಡೆ ತಡೆಗೋಡೆ ನಿರ್ಮಾಣಕ್ಕೆ 2.75 ಕೋಟಿ ಅನುದಾನ ಮಂಜೂರು - Karavali Times ಪುತ್ತೂರು ಕ್ಷೇತ್ರದ 10 ಕಡೆ ತಡೆಗೋಡೆ ನಿರ್ಮಾಣಕ್ಕೆ 2.75 ಕೋಟಿ ಅನುದಾನ ಮಂಜೂರು - Karavali Times

728x90

19 September 2025

ಪುತ್ತೂರು ಕ್ಷೇತ್ರದ 10 ಕಡೆ ತಡೆಗೋಡೆ ನಿರ್ಮಾಣಕ್ಕೆ 2.75 ಕೋಟಿ ಅನುದಾನ ಮಂಜೂರು

ಬೆಂಗಳೂರು, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಹತ್ತು ವಿವಿಧ ಕಡೆಗಳಲ್ಲಿ ತಡೆಗೋಡೆ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯಿಂದ 2.75 ಕೋಟಿ ಅನುದಾನ ಮಂಜೂರಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಇಲಾಖೆಯ ಪ್ರಮುಖರನ್ನು ಭೇಟಿಯಾದ ಶಾಸಕರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರೀ ಮಳೆಗೆ ಅನೇಕ ಕಡೆಗಳಲ್ಲಿ ಕುಸಿತಕ್ಕೊಳಗಾಗಿದೆ. ಹೊಳೆ ಹಾಗೂ ಸಣ್ಣ ತೋಡಿನ ಬದಿಗಳಲ್ಲಿರುವ ಮನೆಯ ವಠಾರ ಹಾಗೂ ಕೃಷಿ ಭೂಮಿ ಕುಸಿತಕ್ಕೊಳಗಾಗಿದೆ. ಕುಸಿತಕ್ಕೊಳಗಾದ ಕಡೆಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಾಸಕರು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಶಾಸಕರ ಮನವಿಯನ್ನು ಪುರಸ್ಕರಿಸಿದ ಇಲಾಖೆ ಅನುದಾನವನ್ನು ಬಿಡುಗಡೆ ಮಾಡಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲ ಮುಡ್ನೂರು ಗ್ರಾಮದ ಮಾಣಿಬೆಟ್ಟು ಪಟ್ಲದಲ್ಲಿ ತೋಡುಬದಿ ತಡೆಗೋಡೆ ನಿರ್ಮಾಣಕ್ಕೆ 20 ಲಕ್ಷ, ವಿಟ್ಲ ಕಸಬಾ ಮಾಮೇಶ್ವರ ಕೃಷ್ಣಪ್ಪ ಮಡಿವಾಳ್ ಅವರ ಮನೆ ಬಳಿ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 20 ಲಕ್ಷ, ಪಾಣಾಜೆ ಗ್ರಾಮದ ಸೂರಂಬೈಲು ತರವಾಡು ಮನೆಯ ಎದುರಿನ ತೋಡು ಬದಿ ತೆಡೆಗೋಡೆ ಕಾಮಗಾರಿಗೆ 55 ಲಕ್ಷ, ಕೋಡಿಂಬಾಡಿ ಗ್ರಾಮದ ಗ್ರಾ ಪಂ ಕಟ್ಟಡದ ಬಳಿ ತಡೆಗೋಡೆ ಕಾಮಗಾರಿಗೆ 55 ಲಕ್ಷ, ಮುಂಢೂರು ಗ್ರಾಮದ ಅಜಲಾಡಿ ಕಟ್ಟೆ ತೋಡು ಬದಿಗೆ ತಡೆಗೋಡೆ ನಿರ್ಮಾಣಕ್ಕೆ 20 ಲಕ್ಷ, ಕಬಕ ಗ್ರಾಮದ ಶಾಬ ಎಂಬವರ ಕೃಷಿ ಭೂಮಿ ಬಳಿ ತೋಡಿನ ಬದಿ ತಡೆಗೋಡೆ ನಿರ್ಮಾಣಕ್ಕೆ 20 ಲಕ್ಷ, ಕೆದಿಲ ಗ್ರಾಮದ ಕಾಂತುಕೋಡಿ ಹೊಳೆ ಬದಿ ತಡೆಗೋಡೆಗೆ 20 ಲಕ್ಷ, ಅಳಿಕೆ ಗ್ರಾಮದ ಎರುಂಬುನಲ್ಲಿ ತಡೆಗೋಡೆ ನಿರ್ಮಾಣಕ್ಕೆ 20 ಲಕ್ಷ, ವಿಟ್ಲ ಕಸಬಾ ಗ್ರಾಮದ ಜೋಗಿಮಠ ತೋಡಿನ ಬದಿ ತಡೆಗೋಡೆಗೆ 30 ಲಕ್ಷ, ಮಾಣಿಲ ಗ್ರಾಮದ ಪುಂಚಿತ್ತಾಯರ ಬೈಲು ಬನದ ಬಳಿ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 15 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮದ 10 ಕಡೆಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ 2.75 ಕೋಟಿ ಅನುದಾನ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿದೆ. ಅರ್ಜಿಗಳು ಇನ್ನೂ ಇದೆ ಸರಕಾರಕ್ಕೆ ಮನವಿ ಮಾಡಿದ್ದೇನೆ. ಹೆಚ್ಚು ಅಗತ್ಯತೆ ಇರುವಲ್ಲಿಗೆ ಇನ್ನೂ ಅನುದಾನ ನೀಡುವಂತೆ ಕೇಳಿದ್ದೇನೆ. ಪುತ್ತೂರು ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಅನುದಾನವನ್ನು ವಿವಿಧ ಇಲಾಖೆಯಿಂದ ತರುವಲ್ಲಿ ಪ್ರಯತ್ನಗಳು ಮುಂದುವರೆಯುತ್ತಿದ್ದು ಕ್ಷೇತ್ರದ ಜನತೆಯ ಬೇಡಿಕೆಯನ್ನು ಒಂದೊಂದಾಗಿ ಈಡೇರಿಸುವೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಕ್ಷೇತ್ರದ 10 ಕಡೆ ತಡೆಗೋಡೆ ನಿರ್ಮಾಣಕ್ಕೆ 2.75 ಕೋಟಿ ಅನುದಾನ ಮಂಜೂರು Rating: 5 Reviewed By: karavali Times
Scroll to Top