ಮಂಗಳೂರು, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ಹಾಗೂ ಕೊಣಾಜೆ ಪೆÇಲೀಸ್ ಠಾಣೆಯ ರೌಡಿ ಶೀಟರ್, ಬಂಟ್ವಾಳ ತಾಲೂಕು, ನರಿಂಗಾನ ಗ್ರಾಮದ ಪಟ್ಟುಲಿಕೆ ನಿವಾಸಿ ನಜೀಮ್ ಅಲಿಯಾಸ್ ನಜ್ಜು (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, ಕೊಲೆ, ಸುಲಿಗೆ, ದಾಳಿ, ಎನ್ ಡಿ ಪಿ ಎಸ್ ಸೇರಿದಂತೆ ಗಂಭೀರ ಪ್ರಕರಣಗಳು ದಾಖಲಾಗಿತ್ತು.
ಆರೋಪಿ ನಜೀಮ್ ಮೇಲೆ ಕೊಣಾಜೆ, ಉಳ್ಳಾಲ, ಮಂಗಳೂರು ನಾರ್ತ್, ಬೇಗೂರು, ಬೆಂಗಳೂರು ನಗರ, ಭಟ್ಕಳ ಪೆÇಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆರೋಪಿ ಜಾಮೀನು ಪಡೆದ ಬಳಿಕ ಒಂದುವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದನು. ನಜೀಮ್ ವಿರುದ್ಧ ಹೊರಡಿಸಲಾಗಿದ್ದ ವಾರೆಂಟ್ ಹಾಗೂ ಪೆÇ್ರೀಕ್ಲಮೇಷನ್ ಬಾಕಿ ಇದ್ದ ಹಿನ್ನೆಲೆಯಲ್ಲಿ, ವಿಶೇಷ ಕ್ರಮ ಕೈಗೊಂಡು ಆರೋಪಿಯನ್ನು ಬೆಂಗಳೂರು ನಗರದಿಂದ ಪತ್ತೆಹಚ್ಚಿ ಬಂಧಿಸಲಾಗಿದೆ.
ಆರೋಪಿಯ ವಿರುದ್ಧ ಉಳ್ಳಾಲ ಪೆÇಲೀಸ್ ಠಾಣೆ, ಕೊಣಾಜೆ ಪೆÇಲೀಸ್ ಠಾಣೆ, ಭಟ್ಕಳ ಪೆÇಲೀಸ್ ಠಾಣೆ, ಮಂಗಳೂರು ನಾರ್ತ್ ಪೆÇಲೀಸ್ ಠಾಣೆ, ಬೇಗೂರು ಪೆÇಲೀಸ್ ಠಾಣೆ, ಬೆಂಗಳೂರು ನಗರ ಪೊಲೀಸ್ ಠಾಣೆ, ಉಳ್ಳಾಲ ಪೆÇಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ಆಯುಕ್ತ ಅವರ ಮಾರ್ಗದರ್ಶನದಲ್ಲಿ ಕೊಣಾಜೆ ಪೆÇಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಾದ ದಿನೇಶ್, ಶರೀಫ್ ಮತ್ತು ರಮೇಶ್ ಅವರ ಶ್ರಮದಿಂದ ಬೆಂಗಳೂರು ನಗರದಿಂದ ಬಂಧಿಸಲಾಗಿದೆ.
0 comments:
Post a Comment