ಬಂಟ್ವಾಳ, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : ಫೇಸ್ ಬುಕ್ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಕಮೆಂಟ್ ಹಾಕಿದ ಪೇಜ್ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ರಹಿಮಾನ್ ಎಂಬವರು ನೀಡಿದ ದೂರಿನ ಪ್ರಕಾರ ಈ ಪ್ರಕರಣ ದಾಖಲಾಗಿದ್ದು, ದೂರುದಾರರು ಸೆ 18 ರಂದು ಮೊಬೈಲಿನಲ್ಲಿ ಪೇಸ್ ಬುಕ್ ಅಪ್ಲಿಕೇಶನ್ ನೋಡುತ್ತಿರುವಾಗ ಅದರಲ್ಲಿ ವಾರ್ತಾಭಾರತಿ ಎಂಬ ಪೇಸ್ ಬುಕ್ ಪೇಜ್ ಹಾಕಿರುವ ನ್ಯೂಸ್ ರೀತಿಯ ಪೆÇೀಸ್ಟಿಗೆ ಹಲವರು ಕಮೆಂಟ್ ಹಾಕಿದ್ದು, ಈ ಪೈಕಿ ಸನಾತನಿ ಸಿಂಹ ಎಂಬ ಪೇಸ್ ಬುಕ್ ಪೇಜ್ ಹೊಂದಿರುವ ವ್ಯಕ್ತಿಯು ಸಮುದಾಯಗಳ ನಡುವೆ ಕೋಮು ಸೌಹಾರ್ದತೆಗೆ ಧಕ್ಕೆಯನ್ನುವುಂಟು ಮಾಡುವ ರೀತಿಯಲ್ಲಿ ಕಮೆಂಟ್ ಹಾಕಲಾಗಿದೆ ಎಂದು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment