ಉಡುಪಿ : ಉದ್ಯಮಿ ಸೈಫುದ್ದೀನ್ ಬರ್ಬರ ಕೊಲೆ, ಮೂವರು ಕೃತ್ಯ ಎಸಗಿರುವ ಸಾಧ್ಯತೆ ಎಂದು ಶಂಕಿಸಿದ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ - Karavali Times ಉಡುಪಿ : ಉದ್ಯಮಿ ಸೈಫುದ್ದೀನ್ ಬರ್ಬರ ಕೊಲೆ, ಮೂವರು ಕೃತ್ಯ ಎಸಗಿರುವ ಸಾಧ್ಯತೆ ಎಂದು ಶಂಕಿಸಿದ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ - Karavali Times

728x90

27 September 2025

ಉಡುಪಿ : ಉದ್ಯಮಿ ಸೈಫುದ್ದೀನ್ ಬರ್ಬರ ಕೊಲೆ, ಮೂವರು ಕೃತ್ಯ ಎಸಗಿರುವ ಸಾಧ್ಯತೆ ಎಂದು ಶಂಕಿಸಿದ ಜಿಲ್ಲಾ ಎಸ್ಪಿ ಹರಿರಾಂ ಶಂಕರ್

ಉಡುಪಿ, ಸೆಪ್ಟೆಂಬರ್ 28, 2025 (ಕರಾವಳಿ ಟೈಮ್ಸ್) : ಜಿಲ್ಲೆಯ ಎ ಕೆ ಎಂ ಎಸ್ ಖಾಸಗಿ ಬಸ್ಸು ಉದ್ಯಮಿ ಹಾಗೂ ರೌಡಿಶೀಟರ್ ಸೈಫುದ್ದೀನ್ ಎಂಬವರನ್ನು ಶನಿವಾರ ಬೆಳಿಗ್ಗೆ ಮನೆಯಲ್ಲೇ ಕೊಲೆಗೈಯಲಾಗಿರುವ ಘಟನೆ ಸಂಭವಿಸಿದೆ. ಮೂವರು ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ “ಉಡುಪಿಯ ಕೊಡುವೂರು ಸಾಲ್ಮರದಲ್ಲಿ ಸೈಫ್ ಕೊಲೆ ನಡೆದಿದೆ. ಸೈಫ್ ಮೇಲೆ 18 ಕ್ರಿಮಿನಲ್ ಕೇಸ್ ಗಳಿವೆ. ಆತ ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಸೈಫ್ ಎರಡು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.

ಮೂರು ಜನ ಆರೋಪಿಗಳು ಏಕಕಾಲದಲ್ಲಿ ಅಟ್ಯಾಕ್ ಮಾಡಿದ್ದಾರೆ. ಆರೋಪಿಗಳು ಎ ಕೆ ಎಂ ಎಸ್ ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಕೊಲೆಗೆ ನಿಖರ ಕಾರಣ ತನಿಖೆಯಿಂದ ಹೊರಬರಲಿದೆ. ಚಾಕು, ತಲ್ವಾರ್ ಮತ್ತಿತರ ಮಾರಕಾಯುಧಗಳಿಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದವರು ಹೇಳಿದ್ದಾರೆ.

ಸೈಫುದ್ದೀನ್ ಮೃತ ದೇಹದ ಹಲವೆಡೆ ಇರಿದ ಗಾಯಗಳಿವೆ. ಮಲ್ಪೆಯ ಮನೆಯಲ್ಲಿ ಒಬ್ಬರೇ ಇದ್ದಾಗ ಅಟ್ಯಾಕ್ ಆಗಿದೆ. ವಾಸದ ಮನೆ ಮಣಿಪಾಲ ಭಾಗದಲ್ಲಿದೆ. ಹಿಂದಿನ ಮರ್ಡರ್ ಗಳಿಗೆ ಪ್ರತಿಕಾರವಾಗಿ ಈ ಕೊಲೆ ನಡೆದಿದೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿದು ಬರಲಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಉಡುಪಿ : ಉದ್ಯಮಿ ಸೈಫುದ್ದೀನ್ ಬರ್ಬರ ಕೊಲೆ, ಮೂವರು ಕೃತ್ಯ ಎಸಗಿರುವ ಸಾಧ್ಯತೆ ಎಂದು ಶಂಕಿಸಿದ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ Rating: 5 Reviewed By: karavali Times
Scroll to Top