ಸುಳ್ಯ, ಸೆಪ್ಟೆಂಬರ್ 20, 2025 (ಕರಾವಳಿ ಟೈಮ್ಸ್) : ಅಡಿಕೆ ಕಳವು ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು ಕಳವಾಗಿರುವ ಅಡಿಕೆ, ಸಾಗಾಟ ಮಾಡಿದ ಅಟೋ ರಿಕ್ಷಾ ಸಹಿತ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಡೆಕೋಲು ಗ್ರಾಮದ ನಿವಾಸಿ ಸುಪ್ರೀತ್ ಕೆ (22) ಹಾಗೂ ಜಾಲ್ಸೂರು ಗ್ರಾಮದ ನಿವಾಸಿ ಮಹಮ್ಮದ್ ಸಿನಾನ್ (21) ಎಂದು ಹೆಸರಿಸಲಾಗಿದೆ.
ಸುಳ್ಯ ಪೆÇಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿರುವ ದಿನಸಿ ಅಂಗಡಿ ಮಾಲಕ ಮಹಮ್ಮದ್ ರಫೀಕ್ ಎಸ್ ಡಿ ಅವರ ಅಡಿಕೆ ಸಂಗ್ರಹಿಸುವ ಗೋಡೌನಿನಿಂದ ಸೆ 12 ರಂದು ರಾತ್ರಿ ಆರೋಪಿಗಳು ಅಡಿಕೆ ಕಳವು ಮಾಡಿದ್ದರು. ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೆ 19 ರಂದು ಮಂಡೆಕೋಲು ಗ್ರಾಮದ ಮುರೂರು ಚೆಕ್ ಪೆÇೀಸ್ಟ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಕಳವು ಮಾಡಿರುವ 1 ಕ್ವಿಂಟಾಲ್ ಸುಲಿದ ಅಡಿಕೆ ಹಾಗೂ ಸಾಗಾಟ ಮಾಡಲು ಉಪಯೋಗಿಸಿರುವ ಆಟೋ ರಿಕ್ಷಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment