ಬಂಟ್ವಾಳ, ಸೆಪ್ಟೆಂಬರ್ 20, 2025 (ಕರಾವಳಿ ಟೈಮ್ಸ್) : ಗಾಂಜಾ ಸೇವನೆ ಮಾಡಿದ್ದ ಯುಕವನೋರ್ವನನ್ನು ಬಂಟ್ವಾಳ ಅಬಕಾರಿ ಉಪಾಧೀಕ್ಷಕರ ತಂಡ ಬಿಳಿಯೂರು ಗ್ರಾಮದಲ್ಲಿ ಶುಕ್ರವಾರ ಬಂಧಿಸಿದೆ.
ಬಂಧಿತ ಯುವಕನನ್ನು ಸ್ಥಳೀಯ ನಿವಾಸಿ ಅಬೂಬಕ್ಕರ್ ಸಿದ್ದೀಕ್ (26) ಎಂದು ಹೆಸರಿಸಲಾಗಿದೆ. ಶುಕ್ರವಾರ ಬಂಟ್ವಾಳ ಅಬಕಾರಿ ಉಪಾಧೀಕ್ಷಕರ ತಂಡ ಬಿಳಿಯೂರು ಗ್ರಾಮದಿಂದ ಎರಡು ಜನ ಯುವಕರನ್ನು ಗಾಂಜಾ ಸೇವನೆ ಬಗ್ಗೆ ಕರೆದುಕೊಂಡು ಹೋಗಿದ್ದು ವೈದ್ಯಕೀಯ ಪರೀಕ್ಷೆ ಮಾಡಿದಾಗ ಅಬೂಬಕ್ಕರ್ ಸಿದ್ದೀಕ್ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಈತನ ಮೇಲೆ ಗಾಂಜಾ ಸೇವನೆ ಪ್ರಕರಣ ದಾಖಲಿಸಿ ನೋಟಿಸ್ ನೀಡಿ ತನಿಖೆ ಕೈಗೊಳ್ಳಲಾಗಿದೆ. ಮತ್ತೊಬ್ಬ ಯುವಕ ಗಾಂಜಾ ಸೇವಿಸಿರುವುದು ದೃಡಪಟ್ಟಿರುವುದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
0 comments:
Post a Comment