ತುಂಬೆ : ತೋಟದಿಂದ ತೆಂಗಿನ ಕಾಯಿ ಕದಿಯುತ್ತಿದ್ದ ವೇಳೆ ಹಿಡಿದ ಸ್ಥಳೀಯರು - Karavali Times ತುಂಬೆ : ತೋಟದಿಂದ ತೆಂಗಿನ ಕಾಯಿ ಕದಿಯುತ್ತಿದ್ದ ವೇಳೆ ಹಿಡಿದ ಸ್ಥಳೀಯರು - Karavali Times

728x90

26 September 2025

ತುಂಬೆ : ತೋಟದಿಂದ ತೆಂಗಿನ ಕಾಯಿ ಕದಿಯುತ್ತಿದ್ದ ವೇಳೆ ಹಿಡಿದ ಸ್ಥಳೀಯರು

 ಬಂಟ್ವಾಳ, ಸೆಪ್ಟೆಂಬರ್ 26, 2025 (ಕರಾವಳಿ ಟೈಮ್ಸ್) : ತೋಟದಿಂದ ಇಬ್ಬರು ಕಳ್ಳರು ತೆಂಗಿನ ಕಾಯಿಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಕದ್ದೊಯ್ಯುವ ಪ್ರಯತ್ನದಲ್ಲಿದ್ದ ವೇಳೆ ಸ್ಥಳೀಯರು ಹಿಡಿದ ಘಟನೆ ತುಂಬೆಯಲ್ಲಿ ಗುರುವಾರ ಸಂಜೆ ನಡೆದಿದೆ. 

ಈ ಬಗ್ಗೆ ಸಜಿಪಮೂಡ ಗ್ರಾಮದ ನಿವಾಸಿ ಎ ಜೀವನ್ ಆಳ್ವ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇವರ ತಾಯಿವರಿಗೆ ಸೇರಿದ ತುಂಬೆಯಲ್ಲಿರುವ ತೋಟದಿಂದ ಯಾರೋ ಇಬ್ಬರು ಕಳ್ಳರು 34 ತೆಂಗಿನ ಕಾಯಿಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಕದ್ದೊಯ್ಯುತ್ತಿದ್ದ ವೇಳೆ ಹಿಡಿದ ಸ್ಥಳೀಯರು ಜೀವನ್ ಅವರಿಗೆ ಕರೆ ಮಾಡಿದ್ದಾರೆ. ಈ ಸಂದರ್ಭ ಜೀವನ್ ಸ್ಥಳಕ್ಕೆ ಬಂದು ನೋಡಿದಾಗ ಇಬ್ಬರು ಅಪರಿಚಿತರು ಒಂದು ಸಾವಿರ ರೂಪಾಯಿ ಮೌಲ್ಯದ ತೆಂಗಿನ ಕಾಯಿಗಳನ್ನು ಚೀಲದಲ್ಲಿ ತುಂಬಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಜೀವನ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ : ತೋಟದಿಂದ ತೆಂಗಿನ ಕಾಯಿ ಕದಿಯುತ್ತಿದ್ದ ವೇಳೆ ಹಿಡಿದ ಸ್ಥಳೀಯರು Rating: 5 Reviewed By: karavali Times
Scroll to Top