ಬಂಟ್ವಾಳ, ಸೆಪ್ಟೆಂಬರ್ 26, 2025 (ಕರಾವಳಿ ಟೈಮ್ಸ್) : ಮಂಗಳೂರು ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಬಂಟ್ವಾಳ ಅಬಕಾರಿ ನಿರೀಕ್ಷಕ ಲಕ್ಮ್ಷಣ್ ಅವರು ತಪಾಸಣೆಗಾಗಿ ಬೊಲೆರೋ ಪಿಕಪ್ ವಾಹನ ನಿಲ್ಲಿಸಲು ಸೂಚಿಸಿದರು ಚಾಲಕ ನಿಲ್ಲಿಸದೆ ಅತೀ ವೇಗವಾಗಿ ಚಲಾಯಿಸಿ ಬಳಿಕ ನಂದಾವರ ರೈಲ್ವೆ ಟ್ರಾಕ್ ಬಳಿ ನಿಲ್ಲಿಸಿ ಪರಾರಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.
ಬಂಟ್ವಾಳ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಅವರು ಸೆ 25 ರಂದು ಕರ್ತವ್ಯದಲ್ಲಿದ್ದಾಗ ಸಂಜೆ 5.20ರವೇಳೆಗೆ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಕೆಎ-70-6904ನೇ ಬೊಲೋರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮಾದÀಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇದ್ದು ಸದ್ರಿ ವಾಹನವನ್ನು ತಡೆದು ತಪಾಸಣೆ ನಡೆಸುವಂತೆ ತಿಳಿಸಿದ ಮೇರೆಗೆ ಲಕ್ಷ್ಮಣ್ ಅವರು ಇಲಾಖಾ ಸಿಬಂದಿಗಳೊಂದಿಗೆ ಕಾಯುತ್ತಿರುವಾಗ ಮಂಗಳೂರು ಕಡೆಯಿಂದ ಬಂದ ಸದ್ರಿ ಪಿಕಪ್ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ಇಲಾಖಾ ವಾಹನವನ್ನು ನೋಡಿದ ಪಿಕಪ್ ಚಾಲಕ ವಾಹನವನ್ನು ನಿಲ್ಲಿಸದೆ ಅತೀ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಾಣೆಮಂಗಳೂರು ಹಳೆ ಸೇತುವೆ ಮೂಲಕ ಚಲಾಯಿಸಿಕೊಂಡು ಹೋಗಿ ನಂದಾವರ ರೈಲ್ವೇ ಟ್ರ್ಯಾಕ್ ಬಳಿ ಖಾಲಿ ಜಾಗದಲ್ಲಿ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2025 ಕಲಂ 281, 132, 109 ಬಿ ಎನ್ ಎಸ್ ಪ್ರಕಾರ ಪ್ರಕರಣದ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment