ಮೂಡಬಿದ್ರೆ, ಸೆಪ್ಟೆಂಬರ್ 17, 2025 (ಕರಾವಳಿ ಟೈಮ್ಸ್) : ಚಾರಣಕ್ಕೆ ತೆರಳಿದ್ದ ಯುವಕನೋರ್ವ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಮೂಡಬಿದ್ರೆ ತಾಲೂಕಿನ ಪಡುಕೊಣಾಜೆ ಗ್ರಾಮದ ಕೊಣಾಜೆ ಕಲ್ಲು ಎಂಬಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.
ಮೃತ ಯುವಕನನ್ನು ಪುತ್ತೂರು ತಾಲೂಕಿನ, ಇರ್ದೆ ಗ್ರಾಮದ ನಿವಾಸಿ ಮಂಗಳೂರಿನಲ್ಲಿ ರಾವ್ ಅಂಡ್ ರಾವ್ ಚಾರ್ಟೆಡ್ ಅಕೌಟೆಂಟ್ ಕಂಪೆನಿಯಲ್ಲಿ ಕೆಲಸಕ್ಕಿದ್ದ ಮನೋಜ್ ಎನ್ (25) ಎಂದು ಹೆಸರಿಸಲಾಗಿದೆ. ಇವರು ತನ್ನ ಸ್ನೇಹಿತ ಕಾರ್ತಿಕ್ ಎಂಬವರೊಂದಿಗೆ ಬುಧವಾರ ಬೆಳಿಗ್ಗೆ 6.20 ರ ವೇಳೆಗೆ ಮೂಡಬಿದ್ರೆ ತಾಲೂಕು, ಪಡುಕೊಣಾಜೆ ಗ್ರಾಮದ ಕೊಣಾಜೆ ಕಲ್ಲು ಎಂಬಲ್ಲಿಗೆ ಚಾರಣಕ್ಕೆ ಹೋಗಿದ್ದು, ಬೆಳಿಗ್ಗೆ ಸುಮಾರು 8.30 ಗಂಟೆಗೆ ಕೊಣಾಜೆ ಕಲ್ಲಿನ ತುದಿಗೆ ತಲುಪಿದ್ದಂತೆ ಮನೋಜ್ ಅವರು ವಾಂತಿ ಮಾಡಿಕೊಂಡು ಸುಸ್ತಾಗಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಜೊತೆಯಲ್ಲಿ ಕಾರ್ತಿಕ್ ಅವರು ತಕ್ಷಣ ಸ್ಥಳೀಯ ಸಾರ್ವಜನಿಕರ ಸಹಕಾರದಿಂದ 108 ಅಂಬುಲೆನ್ಸ್ ಮೂಲಕ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರಾದರೂ ಅದಾಗಲೇ ಮನೋಜ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮನೋಜ್ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅವರ ತಂದೆ ನೀಡಿದ ದೂರಿನಂತೆ ಮೂಡಬಿದ್ರೆ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment