ಬಂಟ್ವಾಳ, ಸೆಪ್ಟೆಂಬರ್ 27, 2025 (ಕರಾವಳಿ ಟೈಮ್ಸ್) : ಕಳೆದ ಹಲವು ವರ್ಷಗಳಿಂದ ಪುರವಾಸಿಗಳ ಉಪಯೋಗಕ್ಕಿಲ್ಲದೆ ನಿರುಪಯುಕ್ತವಾಗಿದ್ದ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಪೇಟೆಗೆ ಹೊಂದಿಕೊಂಡಂತಿರುವ ಕೊಟ್ರಮಣಗಂಡಿ ಬಸ್ ತಂಗುದಾಣದಲ್ಲಿ ಬಸ್ಸಗಳ ನಿಲುಗಡೆಗೆ ಸೂಕ್ತ ಕ್ರಮ ಕೈಗೊಂಡ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೋ ಅವರನ್ನು ಬಂಟ್ವಾಳ ವರ್ತಕರ ಸಂಘದ ವತಿಯಿಂದ ಶÀುಕ್ರವಾರ ಪುರಸಭಾ ಕಾರ್ಯಾಲಯದಲ್ಲಿ ಅಭಿನಂದಿಸಲಾಯಿತು.
ಪುರಸಭಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಂಟ್ವಾಳ ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮಣ ಅಚ್ಯುತ ಬಾಳಿಗಾ, ಕಾರ್ಯದರ್ಶಿ ಸುರೇಶ್ ಬಾಳಿಗಾ ಹಾಗೂ ಅಬ್ದುಲ್ ಖಯ್ಯೂಂ ಅವರ ನೇತೃತ್ವದಲ್ಲಿ ಪುರಸಭಾಧ್ಯಕ್ಷ ವಾಸು ಪೂಜಾರಿ ಹಾಗೂ ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಸಮಿತಿ ಕಾರ್ಯದರ್ಶಿ ಸುರೇಶ್ ಬಾಳಿಗಾ ಅವರು ಮಾತನಾಡಿ, ಅಧ್ಯಕ್ಷ ವಾಸು ಪೂಜಾರಿ ಅವರು 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಸ್ ತಂಗುದಾಣವನ್ನು ಸಾರ್ವಜನಿಕರ ಸದುಪಯೋಗಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಲ್ಲದೆ ಬಂಟ್ವಾಳ ತಿರುಮಲ ವೆಂಕಟರಮಣ ದೇವಳದ ಪರಿಸರದಲ್ಲಿ ವಿದ್ಯುದ್ದೀಪದ ವ್ಯವಸ್ಥೆಯನ್ನು ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ ಎಂದರು. ವರ್ತಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭಾಧ್ಯಕ್ಷ ವಾಸು ಪೂಜಾರಿ ಅವರು, ಎಲ್ಲರ ಸಹಕಾರದಿಂದಾಗಿ ಕಾರ್ಯರೂಪಕ್ಕೆ ತರಲಾಗಿದೆ. ಪುರಸಭಾ ವ್ಯಾಪ್ತಿಯ ಎಲ್ಲಾ ವಾರ್ಡುಗಳನ್ನು ಅಭಿವೃದ್ಧಿ ದೃಷ್ಠಿಯಿಂದ ಸಮಾನವಾಗಿ ಕಂಡಿದ್ದೆನೆ. ಅಧಿಕಾರದಲ್ಲಿರುವಷ್ಟು ದಿನಗಳ ಕಾಲ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
0 comments:
Post a Comment