ಮಂಗಳೂರು, ಸೆಪ್ಟೆಂಬರ್ 29, 2025 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ ಎಲ್ಲ ವಕ್ಫ್ ಸಂಸ್ಥೆಗಳ ಸಮಿತಿಗಳು/ ಆಡಳಿತಾಧಿಕಾರಿಗಳು/ ಮುತವಲ್ಲಿಗಳು/ ಕೇರೆಕ್ಟರ್ ಗಳು ತಮ್ಮ ಸಂಸ್ಥೆಯ ದಾಖಲೆಗಳನ್ನು UWMEED ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಲು ವಕ್ಫ್ ಮಂಡಳಿ ಸೂಚಿಸಿದೆ.
ಸೆಪ್ಟೆಂಬರ್ 19 ರಂದು ನಡೆದ ಮಂಡಳಿಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಂತೆ ಮಸೀದಿ, ದರ್ಗಾ ಸೇರಿದಂತೆ ಎಲ್ಲಾ ನೋಂದಾಯಿತ ವಕ್ಫ್ ಸಂಸ್ಥೆಗಳಿಗೆ ಕೆಳಗಿನಂತೆ ನಿರ್ದೇಶನ ನೀಡಲಾಗಿದೆ. ತಕ್ಷಣವೇ UWMEED ಪೋರ್ಟಲ್‍ನಲ್ಲಿ Maker ಆಗಿ ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು. UWMEED ಕಾಯಿದೆ-2025 ಮತ್ತು ಅದರ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿದ ದಾಖಲೆಗಳನ್ನು 30 ದಿನಗಳ ಒಳಗಾಗಿ ಅಪ್ ಲೋಡ್ ಮಾಡಬೇಕು. ಎಲ್ಲಾ ಅಪ್ ಲೋಡ್ ಪೋರ್ಟಲ್ ನಲ್ಲಿ ಲಭ್ಯವಿರುವ ಸ್ವರೂಪ ಮತ್ತು ಫೈಲ್ ಗಾತ್ರದ ಮಾರ್ಗಸೂಚಿಗಳಿಗೆ ಅನುಗುಣವಾಗಿವೆಯೆ ಎಂದು ಖಚಿತಪಡಿಸಿ ದಾಖಲಿಸಬೇಕು. ಇದರ ಪರಿಶೀಲನೆ ಮತ್ತು ಅನುಮೋದನೆಗಾಗಿ ವಿವಿಧ ಹಂತದ ವಕ್ಫ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಜಿಲ್ಲಾ ವಕ್ಫ್ ಅಧಿಕಾರಿಗಳು 7 ದಿನಗಳೊಳಗೆ ದಾಖಲೆಗಳನ್ನು ಪರಿಶೀಲಿಸುವರು. ಅಧಿಕೃತ ಅನುಮೋದಿಸುವ ಅಧಿಕಾರಿಗಳು 7 ದಿನಗಳೊಳಗೆ ಕ್ರಮ ಕೈಗೊಂಡು ಅನುಮೋದನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. 2025 ರ ಡಿಸೆಂಬರ್ 5 ರ ಒಳಗೆ ಸಂಪೂರ್ಣ ಅಪ್ ಲೋಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ವಕ್ಫ್ ಕಾಯ್ದೆ ಮತ್ತು ಸಂಬಂಧಿತ ನಿಯಮಗಳ ಅಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ಜಿಲ್ಲಾ ವಕ್ಫ್ ಅಧಿಕಾರಿಗಳು ನೊಂದಣಿ ಹಾಗೂ ದಾಖಲೆಗಳನ್ನು ಅಪ್ ಲೋಡ್ ಮಾಡುವ ಕುರಿತು ತರಬೇತಿಯನ್ನು ಆಯೋಜಿಸುವಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.




















0 comments:
Post a Comment