ಅಕ್ಟೋಬರ್ 2 ರಂದು ಜಿಲ್ಲಾಡಳಿತ ವತಿಯಿಂದ ರಾಜಾಜಿ ಪಾರ್ಕಿನಲ್ಲಿ ಗಾಂಧಿ ಜಯಂತಿ ಆಚರಣೆ - Karavali Times ಅಕ್ಟೋಬರ್ 2 ರಂದು ಜಿಲ್ಲಾಡಳಿತ ವತಿಯಿಂದ ರಾಜಾಜಿ ಪಾರ್ಕಿನಲ್ಲಿ ಗಾಂಧಿ ಜಯಂತಿ ಆಚರಣೆ - Karavali Times

728x90

29 September 2025

ಅಕ್ಟೋಬರ್ 2 ರಂದು ಜಿಲ್ಲಾಡಳಿತ ವತಿಯಿಂದ ರಾಜಾಜಿ ಪಾರ್ಕಿನಲ್ಲಿ ಗಾಂಧಿ ಜಯಂತಿ ಆಚರಣೆ

ಮಂಗಳೂರು, ಸೆಪ್ಟೆಂಬರ್ 29, 2025 (ಕರಾವಳಿ ಟೈಮ್ಸ್) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುಟ್ಟು ಹಬ್ಬ ಗಾಂಧೀ ಜಯಂತಿ ಕಾರ್ಯಕ್ರಮವನ್ನು ಅಕ್ಟೋಬರ್ 2 ರಂದು  ಬೆಳಿಗ್ಗೆ 9 ಗಂಟೆಗೆ  ನಗರದ  ಕ್ಲಾಕ್ ಟವರ್ ಬಳಿಯ ರಾಜಾಜಿ ಪಾರ್ಕಿನಲ್ಲಿ ಆಯೋಜಿಸಲಾಗಿದೆ. 

ಕಾರ್ಯಕ್ರಮದಲ್ಲಿ ಗಾಂಧೀ ಭಜನೆಗಳ ಗಾಯನ, ಪ್ರತಿಮೆಗೆ ಮಾಲಾರ್ಪಣೆ, ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ಟೋಬರ್ 2 ರಂದು ಜಿಲ್ಲಾಡಳಿತ ವತಿಯಿಂದ ರಾಜಾಜಿ ಪಾರ್ಕಿನಲ್ಲಿ ಗಾಂಧಿ ಜಯಂತಿ ಆಚರಣೆ Rating: 5 Reviewed By: karavali Times
Scroll to Top