ಬಂಟ್ವಾಳ, ಅಕ್ಟೋಬರ್ 05, 2025 (ಕರಾವಳಿ ಟೈಮ್ಸ್) : ಸ್ಕೂಟರಿನಿಂದ ಇಳಿದು ರಸ್ತೆ ದಾಟುತ್ತಿರುವ ವೇಳೆ ಅಟೋ ರಿಕ್ಷಾ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಲ್ಲಡ್ಕ ಸಮೀಪದ ಕೆ ಸಿ ರೋಡು ಎಂಬಲ್ಲಿ ಅ 2 ರಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಲೋಕೇಶ್ (44) ಎಂದು ಹೆಸರಿಸಲಾಗಿದೆ. ಲೋಕೇಶ್ ಅವರು ಸ್ನೇಹಿತ ಮೆಲ್ಕಾರ್ ನಿವಾಸಿ ಮಹೇಶ್ ಅವರ ಜೊತೆ ಅ 2 ರಂದು ಸ್ಕೂಟರಿನಲ್ಲಿ ಮೆಲ್ಕಾರಿನಿಂದ ಹೊರಟು ರಾತ್ರಿ ಸುಮಾರು 9 ಗಂಟೆಗೆ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಕೆ ಸಿ ರೋಡ್ ಎಂಬಲ್ಲಿಗೆ ತಲುಪಿ ಕಲ್ಲಡ್ಕ ಜಂಕ್ಷನ್ನಿನಿಂದ ಕೆ ಸಿ ರೋಡು ಕಡೆಗೆ ಬರುತ್ತಿದ್ದ ಶಾರದೋತ್ಸವ ನೋಡಲು ಸವಾರ ಮಹೇಶ್ ಸ್ಕೂಟರ್ ನಿಲ್ಲಿಸಿದ್ದಾರೆ. ಈ ವೇಳೆ ಲೋಕೇಶ್ ಸ್ಕೂಟರಿಂದ ಇಳಿದು ನಯಾರ ಪೆಟ್ರೋಲ್ ಪಂಪ್ ಕಡೆಯಿಂದ ಬಲಗಡೆಗೆ ಮೆಲ್ಕಾರ್-ಕಲ್ಲಡ್ಕ ಕಾಂಕ್ರೀಟ್ ಸರ್ವಿಸ್ ರಸ್ತೆ ದಾಟುತ್ತಿರುವ ಸಮಯ ಅದೇ ರಸ್ತೆಯಲ್ಲಿ ಅಂದರೆ ಕಲ್ಲಡ್ಕ ಕಡೆಯಿಂದ ಮೆಲ್ಕಾರ್ ಕಡೆಗೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಸಂತೋಷ್ ಎಂಬವರು ಚಲಾಯಿಸಿಕೊಂಡು ಬಂದ ಆಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಲೊಕೇಶ್ ಅವರು ಕಾಂಕ್ರಿಟ್ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಕಲ್ಲಡ್ಕ ಪುಷ್ಪರಾಜ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ವೈದ್ಯರಿಲ್ಲದ ಕಾರಣ ಮಂಗಳೂರು-ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಅವರನ್ನು ಮಂಗಳೂರು ಸಿಟಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಚಿಕಿತ್ಸೆಯಲ್ಲಿದ್ದ ಲೋಕೇಶ್ ಅ 3 ರಂದು ಮುಂಜಾನೆ 4.15ರ ವೇಳೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.













0 comments:
Post a Comment