ಬಂಟ್ವಾಳ, ಅಕ್ಟೋಬರ್ 05, 2025 (ಕರಾವಳಿ ಟೈಮ್ಸ್) : ಪಿಕಪ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕುಕ್ಕಿಪ್ಪಾಡಿ ಗ್ರಾಮದ ಮುರತ್ತಮೇಲು ಎಂಬಲ್ಲಿ ಸೆ 30 ರಂದು ಸಂಭವಿಸಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡ ಬೈಕ್ ಸವಾರನನ್ನು ಅಜ್ಜಿಬೆಟ್ಟು ಗ್ರಾಮದ ನಿವಾಸಿ ಜಯ ಶೆಟ್ಟಿ (55) ಎಂದು ಹೆಸರಿಸಲಾಗಿದೆ. ಇವರು ಸೆ 30 ರಂದು ಬೆಳಿಗ್ಗೆ 11 ಗಂಟೆಗೆ ವಾಮದಪದವು ಪೇಟೆ ಕಡೆಗೆ ತನ್ನ ಬೈಕಿನಲ್ಲಿ ಹೊರಟು ಕುಕ್ಕಿಪಾಡಿ ಗ್ರಾಮದ ಮುರತ್ತಮೇಲು ಎಂಬಲ್ಲಿಗೆ ಬೆಳಿಗ್ಗೆ ತಲುಪಿತ್ತಿದಂತೆಯೇ ಎಡ ಬದಿಯ ಕಚ್ಚಾ ರಸ್ತೆಯಿಂದ ಮುಖ್ಯ ರಸ್ತೆಗೆ ಪಿಕಪ್ ವಾಹನದ ಚಾಲಕ ಏಕಾಏಕಿ ಚಲಾಯಿಸಿಕೊಂಡು ಬಂದ ಪರಿಣಾಮ ಬೈಕಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪರಿಣಾಮ ಬೈಕಿನಿಂದ ಎಸೆಯಲ್ಪಟ್ಟ ಜಯ ಶೆಟ್ಟಿ ಅವರ ಕಾಲಿಗೆ, ಮೈ-ಕೈಗೆ ಹಾಗೂ ತಲೆಗೆ ಗಾಯಗಳಾಗಿವೆ.
ತಕ್ಷಣ ಅವರನ್ನು ವಾಮದಪದವು ಖಾಸಗಿ ಕ್ಲಿನಿಕಿಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಸಿಟಿ ಸ್ಕ್ಯಾನ್ ಬಗ್ಗೆ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡು ಶಸ್ತ್ರ ಚಿಕಿತ್ಸೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment