ಬಂಟ್ವಾಳ, ಅಕ್ಟೋಬರ್ 13, 2025 (ಕರಾವಳಿ ಟೈಮ್ಸ್) : ಮಗಳ ವಿವಾಹಕ್ಕೆಂದು ಲಾರಿ ಮಾರಾಟ ಮಾಡಿ ತಂದು ಮನೆಯ ಸೋಪಾದ ಮೇಲಿಟ್ಟಿದ್ದ ನಗದು ಹಣ ಕಳವು ಆದ ಘಟನೆ ಪೆರುವಾಯಿ ಗ್ರಾಮದ ಕೊಲ್ಲತ್ತಡ್ಕ ಎಂಬಲ್ಲಿ ಅ 11 ರಂದು ಸಂಭವಿಸಿದೆ.
ಇಲ್ಲಿನ ನಿವಾಸಿ ಖಾಸಿಂ ಸಾಬ್ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಈ ಬಗ್ಗೆ ಇವರ ಪತ್ನಿ ರುಕಿಯಾ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಇವರ ಮಗಳಿಗೆ ಮುಂದಿನ ತಿಂಗಳು ವಿವಾಹ ನಿಶ್ಚಿತಾರ್ಥ ಇದ್ದ ಕಾರಣ ಖಾಸಿಂ ಸಾಬ್ ಅವರು ಅ 10 ರಂದು ಮಗಳಿಗೆ ಚಿನ್ನಾಭರಣ ಖರೀದಿಸಲೆಂದು ಲಾರಿ ಮಾರಾಟ ಮಾಡಿದ 83 ಸಾವಿರ ರೂಪಾಯಿ ಹಣವನ್ನು ಪತ್ನಿಯಲ್ಲಿ ನೀಡಿದ್ದು, ಅವರು ಹಣವನ್ನು ಪರ್ಸ್ ಒಂದರಲ್ಲಿ ಹಾಕಿ ಮನೆಯ ಒಳಗೆ ಬಟ್ಟೆಗಳ ನಡುವೆ ಇಟ್ಟಿದ್ದು, ಅ 11 ರಂದು ಮಗಳ ನಿಶ್ಚಿತಾರ್ಥ ನಿಮಿತ್ತ ಮನೆಯನ್ನು ಕ್ಲೀನ್ ಮಾಡುವ ವೇಳೆ 83 ಸಾವಿರ ರೂಪಾಯಿ ಹಣವಿದ್ದ ಪರ್ಸನ್ನು ಮನೆಯ ಸೋಪಾದ ಮೇಲೆ ಇಟ್ಟಿದ್ದರು. ನಂತರ ಕೆಲಸದ ಮದ್ಯೆ ಹಣದ ಪರ್ಸನ್ನು ಸೋಪಾದ ಮೇಲೆ ಇಟ್ಟಿರುವುದು ಮರೆತು ಹೋಗಿದ್ದು, ಮನೆಯಲ್ಲಿ ಮೊಬೈಲ್ ರೇಂಜ್ ಇಲ್ಲದೇ ಇದ್ದುದರಿಂದ ಅವರ ಮಗ ಮಹಮ್ಮದ್ ರಿಶಾದ್ ಎಂಬಾತ ಮನೆಗೆ ವೈ-ಪೈ ಕನೆಕ್ಷನ್ ಹಾಕಲು ಸೂರಜ್ ಎಂಬಾತನಿಗೆ ಕರೆ ಮಾಡಿ ಈ ಹಿಂದೆ ತಿಳಿಸಿದಂತೆ ಸೂರಜ್ ಮತ್ತು ಆತನೊಂದಿಗಿದ್ದ ಇನ್ನೊಬ್ಬರು ಮದ್ಯಾಹ್ನ 12.30 ಗಂಟೆಗೆ ಮನೆಗೆ ಬಂದು ಅವರು ಸಂಜೆ 4.30 ರವರೆಗೆ ಕೆಲಸ ಮಾಡಿ ಹೋಗಿರುತ್ತಾರೆ. ರಾತ್ರಿ 9 ಗಂಟೆಗೆ ಮನೆಗೆ ಬಂದ ಖಾಸಿಂ ಸಾಬ್ ಅವರು ಹಣದ ಬಗ್ಗೆ ವಿಚಾರಿಸಿದಾಗ ಪತ್ನಿ ರುಕಿಯಾ ಪಿರ್ಯಾದಿದಾರರು ಬೆಳಿಗ್ಗೆ ಸೋಪಾದ ಮೇಲೆ ಹಣ ಇಟ್ಟಿದ ಪರ್ಸ್ ಸಮೇತ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ಮಧ್ಯೆ ಮನೆಗೆ ಸೂರಜ್ ಮತ್ತು ಆತನೊಂದಿಗೆ ಇದ್ದ ಕೆಲಸದಾಳು ಬಿಟ್ಟರೆ ಬೇರೆ ಯಾರು ಬಂದಿರುವುದಿಲ್ಲ. ಈ ಬಗ್ಗೆ ಮನೆ ಮಂದಿಗೆ ಸೂರಜ್ ಹಾಗೂ ಆತನೊಂದಿಗೆ ಬಂದಿದ್ದ ಇನ್ನೊಬ್ಬ ಕೆಲಸದಾಳುವಿನ ಮೇಲೆ ಸಂಶಯವಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment