ಬಂಟ್ವಾಳ, ಅಕ್ಟೋಬರ್ 13, 2025 (ಕರಾವಳಿ ಟೈಮ್ಸ್) : ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಕರೋಪಾಡಿ ಗ್ರಾಮದ ಬೇಡಗುಡ್ಡೆ ಎಂಬಲ್ಲಿ ಅ 8 ರಂದು ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರರನ್ನು ಮೊಹಮ್ಮದ್ ಹಾಗೂ ಅವರ ಪತ್ನಿ ಮಿಶ್ರಿಯಾ ಎಂದು ಹೆಸರಿಸಲಾಗಿದೆ. ಸುಂಕದಕಟ್ಟೆ ಕಡೆಯಿಂದ ಆನೆಕಲ್ಲು ಕಡೆಗೆ ರಾಜೇಶ್ ಡಿಸೋಜ ಎಂಬವರು ಚಲಾಯಿಸುತ್ತಿದ್ದ ಲಾರಿ ಬೇಡಗುಡ್ಡೆ ಎಂಬಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪತಿ-ಪತ್ನಿ ಗಾಯಗೊಂಡಿದ್ದು, ಅವರನ್ನು ತೊಕ್ಕೊಟ್ಟು ಸಹರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment